ನಮಗೆ ವಲಸಿಗರು, ಪ್ರಜೆಗಳು ಸಮಾನರು : ಕತರ್ ಕಾರ್ಮಿಕ ಸಚಿವ

ಜಿನೀವಾ , ಮಾ. 24 : ಕತರ್ ದೇಶದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ವಲಸಿಗ ನಿವಾಸಿಗಳು ಹಾಗು ಕತರೀ ಪ್ರಜೆಗಳಷ್ಟೇ ಪ್ರಾಮುಖ್ಯತೆ ಹೊಂದಿದ್ದು ಅವರಿಗೆ ಸಮಾನ ಹಕ್ಕುಗಳಿವೆ ಎಂದು ಕತರ್ ಕಾರ್ಮಿಕ ಸಚಿವೆ ಡಾ. ಇಸ್ಸ ಬಿನ್ ಸಾದ್ ಅಲ ಜಫಾಲಿ ಅಲ್ ನುಐಮಿ ಅವರು ಜಿನೇವಾದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ಯ ಆಡಳಿತ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
ಕತರ್ ದೇಶದ ಕಾನೂನು ಹಾಗು ಸಂವಿಧಾನದ ಪ್ರಕಾರ ಅವರಲ್ಲಿ ನಮಗೆ ಯಾವುದೇ ಭೇದವಿಲ್ಲ. ಅವರೂ ಕತರ್ ಪ್ರಜೆಗಳಷ್ಟೇ ಸಮಾನರು ಎಂದು ನುಐಮಿ ಹೇಳಿದ್ದಾರೆ. " ಕತರ್ ನಲ್ಲಿರುವ ವಿದೇಶೀ ಕೆಲಸಗಾರರ ಸುರಕ್ಷತೆಗೆ ದೇಶದ ಕಾಯ್ದೆ, ಕಾನೂನು ಹಾಗು ನೀತಿಗಳನ್ನು ಇನ್ನಷ್ಟು ಈ ನಿಟ್ಟಿನಲ್ಲಿ ಸದೃಢ ಗೊಳಿಸಲು ಕತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ ತಾನಿ ಹಾಗು ಕತರ್ ಬದ್ಧವಾಗಿದೆ " ಎಂದವರು ಪುನರುಚ್ಚರಿಸಿದರು.
ಆದರೆ ಕತರ್ ನಲ್ಲಿ ಒಂದು ಮಿತಿಯವರೆಗೆ ಮಾತ್ರ ವಲಸಿಗರಿಗೆ ಈಗ ಹಕ್ಕುಗಳಿವೆ. ಅವರಿಗೆ ಕತರ್ ಪ್ರಜೆಗಳಂತೆ ಪ್ರಾಯೋಜಕರ ಅನುಮತಿಯಿಲ್ಲದೆ ಉದ್ಯೋಗ ಬದಲಾಯಿಸುವ, ಸಾಲ ಪಡೆಯುವ ಹಾಗು ವಾಹನ ಚಾಲನಾ ಪರವಾನಿಗೆ ಪಡೆಯುವಂತಿಲ್ಲ.





