ಗಣಿಗಾರಿಕೆ ವಿರೋಧಿಗೆ ಲಾಕಪ್‌ನಲ್ಲಿ ಹಲ್ಲೆ
ಪಣಜಿ, ಮಾ.24: ತಮ್ಮ ಗ್ರಾಮದ ರಸ್ತೆಯ ಮೂಲಕ ಅದಿರು ಸಾಗಾಟವನ್ನು ವಿರೋಧಿಸಿ ದಕ್ಷಿಣ ಗೋವಾದ ಕಾವ್ರೆಂ ಗ್ರಾಮಸ್ಥರು ಬುಧವಾರ ನಡೆಸಿದ ಪ್ರತಿಭಟನೆ ವೇಳೆ ಬಂಧಿತರಾಗಿದ್ದ ಐವರ ಪೈಕಿ ಓರ್ವನ ಮೇಲೆ ಸಡಾ ಜೈಲಿನಲ್ಲಿ ಸಹ ಕೈದಿಗಳು ಹಲ್ಲೆ ನಡಸಿದ್ದಾರೆ. ರವೀಂದ್ರ ವೆಲಿಪ್ ಹಲ್ಲೆಗೊಳಗಾಗಿರುವ ವ್ಯಕ್ತಿ. ಹಲ್ಲೆಯ ಕುರಿತು ಮಾಹಿತಿ ಪಡೆದ ಪೊಲೀಸರು ಜೈಲಿಗೆ ತೆರಳಿ ವೆಲಿಪ್‌ರನ್ನು ಸಂಪರ್ಕಿಸಿದರಾದರೂ ದೂರನ್ನು ಸಲ್ಲಿಸಲು ಅವರು ನಿರಾಕರಿಸಿದ್ದಾರೆ. ಅವರು ಜಾಮೀನಿನಲ್ಲಿ ಬಿಡುಗಡೆಗೊಳ್ಳುವ ಸ್ವಲ್ಪ ಮೊದಲು ಈ ಹಲ್ಲೆ ನಡೆದಿದೆ.
Next Story





