ಬೈಂದೂರು: ರೈಲಿನಲ್ಲಿ ಪರ್ಸ್ ಕಳವು
ಬೈಂದೂರು, ಮಾ.24: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಪರ್ಸ್ ಕಳವು ಮಾಡಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವಾದ ಮೊರ್ಗೊ ನಿವಾಸಿ ಶರ್ಮಿಳಾ ಮಾನಿ(43) ಎಂಬವರು ದಾದರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಾ. 17ರಂದು ಮಧ್ಯರಾತ್ರಿ ಪ್ರಯಾಣಿಸುತ್ತಿದ್ದ ವೇಳೆ ಕುಂದಾಪುರ ಬಿಜೂರಿನಲ್ಲಿ ಕಳ್ಳರು ಶರ್ಮಿಳಾರ ಬ್ಯಾಗನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.
ಬ್ಯಾಗಿನಲ್ಲಿ 16,000ರೂ. ನಗದು, 30,000 ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣ, ಪಾಸ್‌ಪೋರ್ಟ್, ಬ್ಯಾಂಕ್ ಬುಕ್, ಎಟಿಎಂ ಕಾರ್ಡ್, ಹಾಗೂ ಇತರ ದಾಖಲಾತಿಗಳು ಮತ್ತು 2 ಮೊಬೈಲ್ ಫೋನ್‌ಗಳಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





