ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ
ಬ್ರಹ್ಮಾವರ, ಮಾ.24: ಹಾವಂಜೆ ಗ್ರಾಮದ ಇರ್ಮಾಡಿ ಪರಿಸರದ ಮಡಿಸಾಲು ಹೊಳೆ ಎಂಬಲ್ಲಿ ಗುರುವಾರ ಬೆಳಗ್ಗೆ ಯಂತ್ರಗಳನ್ನು ಬಳಸಿ ಅಕ್ರಮವಾಗಿ ನಡೆಸುತ್ತಿದ್ದ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ವಾಹನ ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಮಡಿಸಾಲು ಹೊಳೆಯಲ್ಲಿ ಹಲವು ಸಮಯಗಳಿಂದ ದಕ್ಕೆ ನಿರ್ಮಿಸಿಕೊಂಡು ಯಂತ್ರವನ್ನಿಟ್ಟು ಮರಳುಗಾರಿಕೆ ಮಾಡುತ್ತಿರುವ ಕುರಿತ ಖಚಿತ ಮಾಹಿತಿಯಂತೆ ಸ್ಥಳೀಯರ ಸಮ್ಮುಖದಲ್ಲಿ ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ ನೇತೃತ್ವದ ಗ್ರಾಮ ಲೆಕ್ಕಿಗರು, ಪೊಲೀಸ್ ಇಲಾಖೆಯ ಸಿಬ್ಬಂದಿ ತಂಡವು ದಾಳಿ ನಡೆಸಿ ಮರಳುಗಾರಿಕೆಗೆ ಬಳಸಿದ ಸೊತ್ತುಗಳು, ಎರಡು ಗೂಡ್ಸ್ ವಾಹನಗಳನ್ನು ವಶಪಡಿಸಿಕೊಂಡಿದೆ. ಈ ಮರಳುಗಾರಿಕೆಯನ್ನು ಅನ್ಸಾರ್ ಅಹ್ಮದ್ ಎಂಬವರು ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





