ಮಾ.27: ಸಾಮಗ ಸಂಸ್ಮರಣೆ
ಉಡುಪಿ, ಮಾ.24: ತುಳುಕೂಟ ಉಡುಪಿ ವತಿಯಿಂದ ಹರಿಕಥೆ ಮತ್ತು ಯಕ್ಷಗಾನ ಕಲಾವಿದ ಮಲ್ಪೆ ರಾಮದಾಸ ಸಾಮಗರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನ ಮಾ.27ರಂದು ಸಂಜೆ 5:30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಲಿದ್ದಾರೆ. ಪರ್ಕಳ ವಿಟ್ಲ ಜೋಶಿ ಪ್ರತಿಷ್ಠಾನದ ಡಾ.ಹರೀಶ್ ಜೋಶಿ ಸಾಮಗ ಸಂಸ್ಮರಣೆ ನಡೆಸಿಕೊಡಲಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿಯವರಿಗೆ ಸಾಮಗ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ತಾರಾನಾಥ ವರ್ಕಾಡಿ ರಚಿಸಿದ ‘ದೇವೆರೆಗ್ ಅರ್ಪಣೆ’ ತುಳು ಪೌರಾಣಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





