ನಾಳೆ ಐರೋಡಿ ಗೋವಿಂದಪ್ಪರಿಗೆ ಸನ್ಮಾನ
ಉಡುಪಿ, ಮಾ.24: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪರ 70 ವರ್ಷದ ಸಂಭ್ರಮವನ್ನು ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲು ಅವರ ಶಿಷ್ಯರು ನಿರ್ಧರಿಸಿದ್ದಾರೆ ಎಂದು ಐರೋಡಿ ಶಿಷ್ಯ ಅಶೋಕ ಆಚಾರ್ಯ ಸಾಬರಕಟ್ಟೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಈ ಪ್ರಯುಕ್ತ ಕೋಟದ ಗಾಂಧಿ ಮೈದಾನದಲ್ಲಿ ಮಾ.26ರಂದು ರಾತ್ರಿ 9:30ಕ್ಕೆ ಸನ್ಮಾನ, ಬಿರುದು ಪ್ರದಾನ, ಸಹಾಯಧನ ಅರ್ಪಣೆಯ ಮೂಲಕ ಆಚರಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟದ ಉದ್ಯಮಿ ಆನಂದ್ ಸಿ.ಕುಂದರ್ ವಹಿಸಲಿದ್ದು, ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಭಾಸ್ಕರ ಆಚಾರ್ಯ ಸಾಬರಕಟ್ಟ್ಟೆ, ಕೇಶವ ಆಚಾರ್ಯ, ಸಂದೇಶ ಶೆಟ್ಟಿ, ಮುರಳೀಧರ ಆಚಾರ್ಯ ಉಪಸ್ಥಿತರಿದ್ದರು.
Next Story





