‘ಟ್ಯಾಲೆಂಟ್’ನಿಂದ ಟೈಲರಿಂಗ್ ಸೆಂಟರ್ ಶುಭಾರಂಭ
ಮಂಗಳೂರು, ಮಾ.24: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಪಾವೂರು ಗ್ರಾಪಂ ಸಹಯೋಗ ದೊಂದಿಗೆ ತೆರೆಯಲಾದ ವಿನ್ಯಾಸ ಟೈಲರಿಂಗ್ ಸೆಂಟರ್ ಇತ್ತೀಚೆಗೆ ಶುಭಾ ರಂಭಗೊಂಡಿತು. ನಿರುದ್ಯೋಗಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಪಾವೂರು ಗ್ರಾಪಂನ ಸಮುದಾಯ ಭವನದಲ್ಲಿ ಉಚಿತ ಟೈಲರಿಂಗ್ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ. ಪಾವೂರು ಗ್ರಾಪಂನ ಉಪಾಧ್ಯಕ್ಷೆ ಲೀಲಾವತಿ ಮತ್ತು ಮಾಜಿ ಉಪಾಧ್ಯಕ್ಷೆ ಬೀಫಾತಿಮ ಜೊತೆಯಾಗಿ ಸೆಂಟರನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪಾವೂರು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಜಮೀಲಾ ಬಾನು, ಪಾವೂರು ಗ್ರಾಪಂ ಪಿಡಿಒ ರಜನಿ ಮಾತನಾಡಿದರು. ಸಹನಾ ಕೌನ್ಸೆಲಿಂಗ್ ಸೆಂಟರ್ನ ಮುಖ್ಯ ಕೌನ್ಸೆಲರ್ ಖೈರುನ್ನಿಸಾ ಸೈಯದ್ ಅಧ್ಯಕ್ಷತೆ ವಹಿಸಿದ್ದರು. ಆಸರೆಯ ಸದಸ್ಯರಾದ ಸಲ್ಮಾ ಉಮರ್, ಆಸಿಯಾ ಮುಹಮ್ಮದ್ ಉಪಸ್ಥಿತರಿದ್ದರು. ಮುಮ್ತಾಝ್ ಹಕೀಮ್ ಕಿರಾಅತ್ ಪಠಿಸಿದರು. ಆಸರೆ ವಿಮೆನ್ಸ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷೆ ಶಬೀನಾ ಅಖ್ತರ್ ಸ್ವಾಗತಿಸಿದರು. ಆಸರೆಯ ಪ್ರಧಾನ ಕಾರ್ಯದರ್ಶಿ ಆತಿಕಾ ರಫೀಕ್ ಪ್ರಸ್ತಾವನೆಗೈದರು. ಆಸರೆಯ ಸದಸ್ಯೆ ಮುಮ್ತಾಝ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಟ್ಯಾಲೆಂಟ್ನ ಪಿಆರ್ಒ ಫರೀದಾ ಗೋರಡ್ಕ ವಂದಿಸಿ, ರಮ್ಲಾ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.