ರಿಸ್ಟ್ ವಾಚ್ ಬ್ಯಾಟರಿ ನುಂಗಿ ಮೂರುವರೆ ವರ್ಷದ ಹೆಣ್ಣುಮಗು ಸಾವು!

ಪಟಿಯಾಲ, ಮಾರ್ಚ್.25: ಮನೆಯವರ ನಿರ್ಲಕ್ಷ್ಯದಿಂದಾಗಿ ಮೂರೂವರೆ ವರ್ಷದ ಮಗುವಿನ ಸಾವು ಸಂಭವಿಸಿರುವುದಾಗಿ ದಿಬಡಾ ಸಂಗ್ರೂರ್ ನಿಂದ ವರದಿಯಾಗಿದೆ. ಮನೆಯಲ್ಲಿ ಆಡುತ್ತಾ ಖುಶಿ ಎಂಬ ಹೆಣ್ಣುಮಗು ರಿಸ್ಟ್ ವಾಚ್‌ನ ಸೆಲ್(ಬ್ಯಾಟರಿ) ತೆಗೆದು ನುಗ್ಗಿದ್ದಳು.
ಮನೆಯವರು ಏನಾದರು ಮಗುವಿನ ಹೊಟ್ಟೆಗೆ ಕೊಟ್ಟರೆ ಸ್ವಾಭಾವಿಕವಾಗಿ ಸೆಲ್ ಹೊರಬರಬಹುದೆಂದು ಹೇಳಿಸುಮ್ಮನಾಗಿದ್ದರು. ಹೀಗೆ ಒಂದು ದಿನ ಸೆಲ್ ಹೊರಬರುವುದನ್ನು ಕಾದರು. ಮರುದಿವಸ ಬೆಳಗ್ಗೆ ಮಗುವಿನ ಹೊಟ್ಟೆಯಿಂದ ಸೆಲ್ ಹೊರಬರಲಿಲ್ಲ. ಆನಂತರ ಮಗವನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಸೆಲ್‌ನ್ನು ತೆಗೆದು ಔಷಧ ಕೊಟ್ಟು ಮಗುವನ್ನು ಮನೆಗೆ ಕಳುಹಿಸಿಕೊಟ್ಟಿದ್ದರು. ಇದಾದ ಹದಿನೈದು ದಿನಗಳಲ್ಲಿ ಮಗುವಿನ ಆರೊಗ್ಯ ಸ್ಥಿತಿ ಹದಗೆಟ್ಟಾಗ ರಾಜೀಂದರ್ ಎಂಬಲ್ಲಿನ ಆಸ್ಪತ್ರೆಗೆ ಸೇರಿಸಲಾಯಿತು.
ಅಲ್ಲಿ ಮಗು ಮೃತವಾಗಿದೆ. ದಿಬಡಾ ಪೊಲೀಸರು ಮಗುವಿನ ಪೋಸ್ಟ್‌ಮಾರ್ಟಂ ನಡೆಸಿದಾಗ ಅದರಲ್ಲಿ ಸೆಲ್ ಮಗುವಿನ ಹೊಟ್ಟೆಯೊಳಗೆ ಲೀಕ್ ಆದುದು ಸಾವಿಗೆ ಕಾರಣವೆಂದು ತಿಳಿದು ಬಂದಿತ್ತು. ಮನೆಯವರ ನಿರ್ಲಕ್ಷ್ಯವೇ ಕುಶಿಯ ಸಾವಿಗೆ ಕಾರಣವಾಯಿತೆಂದು ವರದಿಯಾಗಿದೆ.





