ಗಾಯಗೊಂಡು ಬಿದ್ದಿದ್ದ ಪ್ಯಾಲೆಸ್ತೀನೀ ಯುವಕನ ತಲೆಗೆಗುಂಡಿಕ್ಕಿದ ಇಸ್ರೇಲ್ ಸೈನಿಕ; ವೀಡಿಯೋ ಬಹಿರಂಗ

ಹೆಬ್ರಾನ್ : ಇಸ್ರೇಲಿ ಸೈನಿಕನೊಬ್ಬನಿಗೆಇರಿದಿದ್ದಾರೆನ್ನಲಾದ ಇಬ್ಬರು ಪ್ಯಾಲೆಸ್ತೀನೀಯರನ್ನು ಇಸ್ರೇಲಿ ಪಡೆಗಳು ಗುಂಡಿಕ್ಕಿ ಕೊಂದ ಘಟನೆ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಗುರುವಾರ ನಡೆದಿದ್ದು, ಒಬ್ಬ ದಾಳಿಕೋರನು ಗಾಯಗೊಂಡು ನೆಲಕ್ಕೆ ಬಿದ್ದಿರುವಾಗಲೇ ಆತ ತಲೆಗೆ ಸೇನಾ ಪಡೆಗಳು ಗುಂಡಿಕ್ಕುವ ವೀಡಿಯೋವೊಂದನ್ನು ಇಸ್ರೇಲಿ ಹಕ್ಕು ಸಂಘಟನೆಗಳು ಬಿಡುಗಡೆ ಮಾಡಿವೆ.
ಇರಿತದ ಘಟನೆ ಯಹೂದಿಗಳ ನೆಲೆವೀಡಾಗಿರುವ ಹೆಬ್ರಾನ್ ನಗರದ ಸಮೀಪವಿರುವ ಟೆಲ್ ರುಮೇಡಾದಿಂದ ವರದಿಯಾಗಿದ್ದು.ಪ್ಯಾಲೆಸ್ತೀನಿ ಆರೋಗ್ಯ ಸಚಿವಾಲಯವು ಇಬ್ಬರು ಆಪಾದಿತರನ್ನು21 ವರ್ಷದ ರಮ್ಝಿ ಅಜೀಜ್ ಅಲ್-ಖಸ್ರವಿ ಹಾಗೂ ಅಬೆದ್ ಅಲ್-ಫಟ್ಟಾಹ್ ಯುಸ್ರಿ ಅಲ್ ಶರೀಫ್ ಎಂದು ಗುರುತಿಸಿದೆ. ಇರಿತಕ್ಕೊಳಗಾದ ಇಸ್ರೇಲಿ ಸೈನಿಕನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಇಸ್ರೇಲಿ ಸೈನಿಕನೊಬ್ಬ ಗಾಯಗೊಂಡು ನೆಲದಲ್ಲಿ ಬಿದ್ದಿದ್ದ ಶರೀಫ್‌ನ ತಲೆಗೆ ಗುಂಡಿಕ್ಕುತ್ತಾನೆ. ಹತ್ತಿರದಲ್ಲೇ ಇಸ್ರೇಲಿ ವೈದ್ಯರು ಗಾಯಗೊಂಡಿದ್ದ ಸೈನಿಕನಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದೆ.
ಪ್ಯಾಲೆಸ್ತೀನೀಯರಿಗೆ ಗುಂಡಿಕ್ಕಿದ ಸೈನಿಕನನ್ನು ಬಂಧಿಸಲಾಗಿದ್ದು ತನಿಖೆ ನಡೆಸಲಾಗುವುದೆಂದು ಇಸ್ರೇಲಿ ಮಿಲಿಟರಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ಘಟನೆಯ ಸ್ವಲ್ಪ ಹೊತ್ತಿನ ನಂತರ ಹೆಬ್ರಾನ್‌ನಲ್ಲಿ ಹಲವು ಪ್ರತಿಭಟನೆಗಳು ನಡೆದಿದ್ದು ಸ್ಥಳೀಯ ಪ್ಯಾಲೆಸ್ತೀನಿ ಯುವಕರು ಹಾಗೂ ಇಸ್ರೇಲಿ ಪಡೆಗಳ ನಡುವೆ ಘರ್ಷಣೆಗಳೂ ನಡೆದಿವೆಯೆನ್ನಲಾಗಿದೆ.







