ದಿಲ್ಲಿಯಲ್ಲಿ ದಂತ ವೈದ್ಯನನ್ನು ರಸ್ತೆಯಲ್ಲಿ ಕಬ್ಬಿಣದ ಸರಳಿನಿಂದ ಥಳಿಸಿ ಕೊಂದರು...!

ಹೊಸದಿಲ್ಲಿ, ಮಾ.25: ಮಗನಿಗೆ ಬೈಕ್ ಡಿಕ್ಕಿ ಹೊಡೆದಿರುವುದನ್ನು ಪ್ರಶ್ನಿಸಿದ ತಪ್ಪಿಗೆ ದಂತ ವೈದ್ಯರೊಬ್ಬರನ್ನು ತಂಡವೊಂದು ಮನೆಗೆ ನುಗ್ಗಿ ಅವರನ್ನು ರಸ್ತೆಗೆ ಎಳೆದು ತಂದು ಹಾಕಿ ಸ್ಟಿಕ್, ಬ್ಯಾಟ್ ಮತ್ತು ಕಬ್ಬಿಣದ ಸರಳಿನಿಂದ ಥಳಿಸಿ ಕೊಂದ ಘಟನೆ ದಿಲ್ಲಿಯ ವಿಕಾಸ್‌ಪುರಿ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ
ದಿಲ್ಲಿಯ ವಿಕಾಸ್‌ಪುರಿ ನಿವಾಸಿ ಡಾ.ಪಂಕಜ್ ನಾರಂಗ್ ತಂಡದಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ಪತ್ನಿ ಮಗನನ್ನು ಅಗಲಿದ್ದಾರೆ.
ನಾರಂಗ್ ಅವರು ಕಳೆದ ಬುಧವಾರ ರಾತ್ರಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಒಂದು ರನ್ ಅಂತರದಿಂದ ಗೆದ್ದ ಸಂಭ್ರಮದಲ್ಲಿ ಮಗ , ಸೋದರಿಳಿಯನ ಜೊತೆ ಕ್ರಿಕೆಟ್ ಆಟ ಆಡುತ್ತಿದ್ದಾಗ , ಚೆಂಡು ಆಕಸ್ಮಿಕವಾಗಿ ಮಾರ್ಗಕ್ಕೆ ಹಾರಿತ್ತು.
ಚೆಂಡನ್ನು ಹಿಡಿಲು ಹೋದ ವೈದ್ಯನ ಮಗನಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಈ ಕಾರಣಕ್ಕಾಗಿ ವೈದ ನಾರಂಗ್ ಮತ್ತು ಅವರು ಬೈಕ್ ಸವಾರ ನಾಸಿರ್‌ನ್ನು ಬೈದರು. ಅವರ ನಡುವೆ ವಾಗ್ವಾದ ಉಂಟಾಗಿತ್ತು. .
ಇದರಿಂದ ಕೋಪಗೊಂಡ ನಾಸಿರ್ ಈ ಘಟನೆ ನಡೆದ ಹತ್ತು ನಿಮಿಷದ ಬಳಿಕ ವೈದ್ಯರ ಮನೆಗೆ ತಂಡದೊಂದಿಗೆ ಅಕ್ರಮವಾಗಿ ಪ್ರವೇಶಿಸಿ ನಾರಂಗ್‌ರನ್ನು ಮನೆಯಿಂದ ಮಾರ್ಗಕ್ಕೆ ಎಳೆದು ತಂದು ಬ್ಯಾಟ್, ಹಾಕಿ ಸ್ಟಿಕ್, ಮತ್ತು ಕಬ್ಬಿಣದ ಸರಳಿನಿಂದ ಮನಸೋ ಇಚ್ಛೆ ಥಳಿಸಿ ಪರಾರಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ವೈದ್ಯರ ರಕ್ಷಣೆಗೆ ಧಾವಿಸಿದವರ ಮೇಲೂ ತಂಡ ಹಲ್ಲೆ ನಡೆಸಿತ್ತು ಎಂದು ಹೇಳಲಾಗಿದೆ. ಗಂಭೀರ ಗಾಯಗೊಂಡ ವೈದ್ಯ ನಾರಂಗ್ ಅವರು ಆಸ್ಪತ್ರಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು.
ವೈದ್ಯರ ಥಳಿಸಿ ಕೊಂದ ಪ್ರಕರಣದಲ್ಲಿ ಒಟ್ಟು ಹದಿಮೂರು ಮಂದಿ ಇದ್ದರು. ಇವರಲ್ಲಿ ಬಹುತೇಕ ಮಂದಿ ಹದಿನೆಂಟರಿಂದ ಇಪ್ಪತ್ತರ ಹರೆಯದ ಯುವಕರು ಎಂದು ಪೊಲೀಸರು ತಿಳಿಸಿದ್ದಾರೆ.. ಇವರು ವೈದ್ಯರ ಮನೆಯ ಪಕ್ಕದಲ್ಲಿರುವ ಕೊಳಗೇರಿಯ ನಿವಾಸಿಗಳು. ಸ್ಥಳೀಯ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.





