ಅಮೆರಿಕದ ಪ್ರಾಥಮಿಕ ಶಾಲೆಯಲ್ಲಿ ಯೋಗಕ್ಕೆ ನಿಷೇಧ!

ಜಾರ್ಜಿಯ, ಮಾರ್ಚ್25: ಅಮೆರಿಕದ ಜಾರ್ಜಿಯ ಪ್ರಾಂತದಲ್ಲಿ ಪ್ರಾಥಮಿಕ ಶಾಲೆಯ ಆಡಳಿತ ಯೋಗ ಶಿಕ್ಷಣಕ್ಕೆ ನಿಷೇಧ ಹೇರಿದೆ. ಶಾಲಾಡಳಿತವು ವಿದ್ಯಾರ್ಥಿಗಳನ್ನು ಒತ್ತಡರಹಿತಗೊಳಿಸಲಿಕ್ಕಾಗಿ ಯೋಗ ತರಗತಿಗಳನ್ನು ಆರಂಭಿಸಿತ್ತು. ಆದರೆ ಮಕ್ಕಳ ಹೆತ್ತವರು ಯೋಗದ ವಿರುದ್ಧ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಯೋಗ ತರಗತಿಗಳನ್ನು ತಡೆಹಿಡಿಯಲಾಗಿದೆ. ಯೋಗ ಹಿಂದೂ ಮತ್ತು ಬೌದ್ಧ ದರ್ಮಕ್ಕೆ ಸಂಬಂಧಿಸದ್ದಾದ್ದರಿಂದ ಅದನ್ನು ಶಾಲಾ ಶಿಕ್ಷಣದಲ್ಲಿ ಸೇರಿಸುವುದು ಕ್ರೈಸ್ತೇತರ ವಿಶ್ವಾಸ ಅತಿಕ್ರಮಎಂದು ಆರೋಪಿಸಲಾಗಿದೆ. ಅಟ್ಲಾಂಟ ಜರ್ನಲ್-ಕಾನ್ಸ್ಟಿಟ್ಯೂಶನ್‌ನ ಪ್ರಕಾರ ತಂದೆತಾಯಿಯರಿಗೆ ಬುಲಾಯಿಯ ಪ್ರಿನ್ಸಿಪಾಲ್‌ರ ಕಳೆದ ವಾರ ಇಮೇಲ್ ಕಳುಹಿಸಿ ಯೋಗವನ್ನು ಶಾಲೆಯ ಸೆಲೆಬಸ್‌ನಿಂದ ತೆರವುಗೊಳಿಸಿದ ಮಾಹಿತಿಯನ್ನು ನೀಡಿದ್ದಾರೆ.
ಇಮೇಲ್‌ನಲ್ಲಿ ಪ್ರಿನ್ಸಿಪಾಲ್ ಮಕ್ಕಳ ಒತ್ತಡ ಕಡಿಮೆ ಮಾಡುವುದಕ್ಕಾಗಿ ಈ ಯೋಗ ಪ್ರಕ್ರಿಯೆ ಕೆಲವು ವರ್ಷಗಳಿಂದ ಚಾಲ್ತಿಯಲ್ಲಿತ್ತು ಎಂದು ತಿಳಿಸಿದ್ದರು. ಆದರೆ ಇತ್ತೀಚೆಗೆ ಯೋಗದ ಕುರಿತು ತಪ್ಪಾಭಿಪ್ರಾಯ ವ್ಯಕ್ತವಾಗಿದೆ. ಕೆಲವು ಜನರಿಗೆ ಯೋಗ ಪ್ರಾಕ್ಟೀಸ್ ಒಳ್ಳೆಯದೆಂದು ಅನಿಸಿಲ್ಲ. ಅದು ಅಪಮಾನಕರವಾಗಿ ಅವರು ಭಾವಿಸಿದ್ದಾರೆ.ಆದ್ದರಿಂದ ಯೋಗ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆಂದು ವರದಿಯಾಗಿದೆ. ಯೋಗ ಕಾರ್ಯಕ್ರಮದಲ್ಲಿ ಎರಡುಕೈಗಳನ್ನು ಜೋಡಿಸಿ ನಮಸ್ತೆ ಎಂದು ಹೇಳಲಾಗುತ್ತಿತ್ತು. ಪ್ರಿನ್ಸಿಪಾಲ್ ಇನ್ನುಮುಂದೆ ಇಂತಹ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಇಮೇಲ್‌ನಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ತಿಳಿಸಿದ್ದಾರೆಂದು ವರದಿಯಾಗಿದೆ.







