ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಕ್ಕೆ 21 ರನ್‌ಗಳ ಜಯ

ಮೊಹಾಲಿ, ಮಾ.25: ಟ್ವೆಂಟಿ-20 ವಿಶ್ವಕಪ್‌ನ ಸೂಪರ್ 10ರ ಪಂದ್ಯದಲ್ಲಿ ಇಂದು ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯ 21 ರನ್‌ಗಳ ಜಯ ಗಳಿಸಿದೆ.
ಇಲ್ಲಿನ ಪಿಸಿಎ ಸ್ಟೇಡಿಯಂನಲ್ಲಿ ಗೆಲುವಿಗೆ 194 ರನ್ ಗಳಿಸಬೇಕಿದ್ದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 172ರನ್ ಗಳಿಸಿತು.
ಪಾಕಿಸ್ತಾನ ತಂಡದ ಶಾರ್ಜಿಲ್ ಖಾನ್ 30 ರನ್, ಅಹ್ಮದ್ ಶೆಹಝಾದ್ 1ರನ್, ಖಾಲಿದ್ ಲತೀಫ್ 46 ರನ್, ಉಮರ್ ಅಕ್ಮಲ್ 32ರನ್, ಶುಐಬ್ ಮಲಿಕ್ ಔಟಾಗದೆ 40ರನ್, ಸರ್ಫರಾಜ್ ಅಹ್ಮದ್2ರನ್, ಶಾಹಿದ್ ಅಫ್ರಿದಿ14 ರನ್, , ಮುಹಮ್ಮದ್ ಶಮಿ ಔಟಾಗದೆ 4ರನ್ ಗಳಿಸಿದರು.
ಆಸ್ಟ್ರೇಲಿಯದ ಫಾಕ್ನರ‍್ 27ಕ್ಕೆ 5 ಮತ್ತು ಝಾಂಪ 32ಕ್ಕೆ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆಸ್ಟ್ರೇಲಿಯ 193/4: ನಾಯಕ ಸ್ಟೀವನ್ ಸ್ಮಿತ್(ಔಟಾಗದೆ 61) ಹಾಗೂ ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್(30) ಹಾಗೂ ಶೇನ್ ವ್ಯಾಟ್ಸನ್(ಔಟಾಗದೆ 44) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯ ತಂಡ 4 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿದೆ.
ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇನಿಂಗ್ಸ್ ಆರಂಭಿಸಿದ ಉಸ್ಮಾನ್ ಖ್ವಾಜಾ(21) ಹಾಗೂ ಆ್ಯರೊನ್ ಫಿಂಚ್(15) ಸಾಧಾರಣ ಆರಂಭ ನೀಡಿದರು.
7.2 ಓವರ್‌ಗಳಲ್ಲಿ ಆಸ್ಟ್ರೇಲಿಯ 57 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆಗ 4ನೆ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿದ ಸ್ಮಿತ್(61 ರನ್, 43 ಎಸೆತ, 7 ಬೌಂಡರಿ) ಹಾಗೂ ಮ್ಯಾಕ್ಸ್‌ವೆಲ್ ತಂಡವನ್ನು ಆಧರಿಸಿದರು. ಮ್ಯಾಕ್ಸ್‌ವೆಲ್(30 ರನ್, 18 ಎಸೆತ, 3 ಬೌಂಡರಿ, 1 ಸಿಕ್ಸರ್) ಔಟಾದ ನಂತರ ಸ್ಮಿತ್ ಅವರೊಂದಿಗೆ ಕೈಜೋಡಿಸಿದ ಶೇನ್ ವ್ಯಾಟ್ಸನ್(ಔಟಾಗದೆ 44, 21 ಎಸೆತ, 4 ಬೌಂಡರಿ, 3 ಸಿಕ್ಸರ್) 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 74 ರನ್ ಸೇರಿಸಿ ತಂಡ ನಿಗದಿತ 20 ಓವರ್‌ಗಳಲ್ಲಿ 193 ರನ್ ಗಳಿಸಲು ನೆರವಾದರು.
ಪಾಕ್ ಪರ ವಹಾಬ್ ರಿಯಾಝ್(2-35) ಹಾಗೂ ಇಮಾದ್ ವಸೀಂ(2-31) ತಲಾ ಎರಡು ವಿಕೆಟ್ ಪಡೆದರು. ವಿದಾಯದ ಪಂದ್ಯ ಆಡಿದ ನಾಯಕ ಶಾಹಿದ್ ಅಫ್ರಿದಿ 4 ಓವರ್‌ಗಳಲ್ಲಿ 27 ರನ್ ನೀಡಿದರೂ ವಿಕೆಟ್ ದೊರೆಯಲಿಲ್ಲ.







