ಸೂರಿಕುಮೇರು : ಸರಣಿ ಅಪಘಾತ, ಆಟೊ ಚಾಲಕನಿಗೆ ಗಾಯ

ಬಂಟ್ವಾಳ: ತಾಲೂಕಿನ ಸೂರಿಕುಮೇರು ಸಮೀಪದ ದಾಸರಕೋಡಿ ಎಂಬಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಆಟೋ ಚಾಲಕನೋರ್ವ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ 3:30 ಗಂಟೆ ಸುಮಾರಿಗೆ ನಡೆದಿದೆ.
ಕಲ್ಲಡ್ಕದಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಪಿಕ್ ಅಪ್ ವಾಹನದ ಹಿಂಭಾಗಕ್ಕೆ ಮಾರುತಿ 800 ಕಾರು, ಅದರ ಹಿಂಭಾಗಕ್ಕೆ ಆಟೋ ಢಿಕ್ಕಿ ಹೊಡೆದಿದೆ. ಅಪಘಾತದಿಂದ ಕೆಎ.21.ಎ.8381 ನಂಬರಿನ ಆಟೋ ಚಾಲಕನ ಮುಖದ ಭಾಗಕ್ಕೆ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಟೋ ಚಾಲಕನ ಹೆಸರು ತಿಳಿದು ಬಂದಿಲ್ಲ.
Next Story





