ಅಳಕೆಮಜಲು : ಇಂದು ಪ್ರಭಾಷಣ ಹಾಗೂ ಬುರ್‍ದಾ ಮಜ್ಲಿಸ್
ವಿಟ್ಲ : ಇಲ್ಲಿಗೆ ಸಮೀಪದ ಅಳಕೆಮಜಲು ಖ್ವಾಜಾ ಗರೀಬ್ ನವಾಝ್ ಮಿಲಾದ್ ಸಮಿತಿಯ ದಶಮಾನೋತ್ಸವ ಪ್ರಯುಕ್ತ ಮತ ಪ್ರವಚನ ಹಾಗೂ ಬುರ್‍ದಾ ಮಜ್ಲಿಸ್ ಕಾರ್ಯಕ್ರಮವು ಮಾ 26 ರಂದು ಇಲ್ಲಿನ ಮಸೀದಿ ಬಳಿ ನಡೆಯಲಿದೆ.
ಕಾರ್ಯಕ್ರಮವನ್ನು ಹಾಜಿ ಮುಹಮ್ಮದ್ ಮುಸ್ಲಿಯಾರ್ ಅಲ್-ಖಾಸಿಮಿ ಅಳಕೆಮಜಲು ಉದ್ಘಾಟಿಸಲಿದ್ದು, ಸ್ಥಳೀಯ ಖತೀಬ್ ಎಸ್.ವೈ. ಮುಹಮ್ಮದ್ ಶರೀಫ್ ಸಖಾಫಿ ಅಧ್ಯಕ್ಷತೆ ವಹಿಸುವರು. ಕೇರಳ-ಮಲಪ್ಪುರಂನ ಸಯ್ಯಿದ್ ಮುಹ್ಸಿನ್ ಅಲವಿ ತಂಙಳ್ ದುವಾಶಿರ್ವಚನಗೈಯಲಿದ್ದು, ಜ್ಯೂನಿಯರ್ ಮಅದನಿ ಖ್ಯಾತಿಯ ಅಬ್ದುಲ್ ವಹಾಬ್ ನಈಮಿ ಕೊಲ್ಲಂ ಮುಖ್ಯ ಭಾಷಣಗೈಯಲಿದ್ದಾರೆ.
ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಜೆಡಿಎಸ್ ದ.ಕ., ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞ, ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಕೆ.ಎ. ಸಿದ್ದೀಕ್ ಸಹಿತ ಹಲವಾರು ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





