ಮಂಗಳೂರು: ಜಿಲ್ಲೆಯ ಮರದ ಮಿಲ್ಲಿನ ಮಾಲಕರ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷರಾಗಿ ಅಬ್ದುಲ್ ಅಜೀಜ್
ಮಂಗಳೂರು, ಮಾ, 25:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡಿದ್ದ ಕರ್ನಾಟಕ ಟಿಂಬರ್ ಮಿಲ್ ಎಸೋಸಿಯೇಶನ್ ಹೆಸರಿನಲ್ಲಿ ಕಳೆದ 20ವರ್ಷಗಳ ಹಿಂದೆ ಕ್ರೀಯಾಶೀಲವಾಗಿದ್ದ ಸಂಘಟನೆ ಬಳಿಕ ನಿಷ್ಕ್ರೀಯವಾಗಿದ್ದ ಕಾರಣ ಅಸಂಘಟಿತರಾಗಿದ್ದ ಜಿಲ್ಲೆಯ ಮರದ ಮಿಲ್ಲಿನ ಮಾಲಕರು ಇಂದು ನಗರದ ಖಾಸಗಿ ಹೊಟೇಲೊಂದರಲ್ಲಿ ಸಭೆ ಸೇರಿ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆರಿಸಿದರು. ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಹಾಜಿ ವೈ ಅಬ್ದುಲ್ಲಾ ಕುಂಞಯವರನ್ನು ಹಾಗೂ ಕಾರ್ಯದರ್ಶಿಯಾಗಿ ಮುಹಮ್ಮದ್ ಹಾಜಿಯವರನ್ನು ಆರಿಸ ಲಾಯಿತು.ಅಧ್ಯಕ್ಷರಾಗಿ ಅಬ್ದುಲ್ ಅಜೀಜ್,ಉಪಾಧ್ಯಕ್ಷರಾಗಿ ಫೈಝಲ್ ,ಕಾರ್ಯದರ್ಶಿಯಾಗಿ ವಿಶ್ವನಾಥ ನಾಯಕ್,ಜಂಟಿ ಕಾರ್ಯದರ್ಶಿಯಾಗಿ ಮುಖ್ತಾರ್,ಕೋಶಾಧಿಕಾರಿಯಾಗಿ ಗೋವಿಂದ ಬಾಪಟೇಲ್,ಕಾನೂನು ಸಲಹೆಗಾರರಾಗಿ ಭಾಸ್ಕರ್ ರನ್ನು ಸಭೆಯಲ್ಲಿ ಆರಿಸಲಾಯಿತು.ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರೀಶ್ ಕಾಮತ್(ಸುಳ್ಯ), ಕೆ.ಪಿ.ಮುಹಮ್ಮದ್(ಪುತ್ತೂರು), ನಾಸಿರ್(ಮಂಗಳೂರು ಉತ್ತರ),ಅಬ್ದುಲ್ಲಾ(ಮಂಗಳೂರು ದಕ್ಷಿಣ), ದಿನೇಶ್(ಮಂಗಳೂರು ಸೆಂಟ್ರಲ್),ರಿತೇಶ್ ಬಾಳಿಗ (ಬಂಟ್ವಾಳ),ವೈಕುಂಠ ಪ್ರಭು(ಬೆಳ್ತಂಗಡಿ) ಸೇರಿದಂತೆ 7 ಮಂದಿ ಸದಸ್ಯರನ್ನು ಆರಿಸಲಾಯಿತು.
ನೂತನ ಸಮಿತಿ ರಚನಾ ಸಭೆಯ ವೇದಿಕೆಯಲ್ಲಿ ಮಂಗಳೂರು ಮರದ ಮಿಲ್ಲಿನ ಮಾಲಕರಾದ ಪಿವಿ.ಬಿಜು,ಕೃಷ್ಣ ಕಾಮತ್,ಅಬ್ದುಲ್ ಅಜೀಜ್,ವಿಶ್ವನಾಥ ನಾಯಕ್,ಅಬ್ದುಲ್ ರಹ್‌ಮಾನ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.ಅಬ್ದುಲ್ ನಾಸಿರ್ ಕಾರ್ಯಕ್ರಮ ನಿರೂಪಿಸಿದರು.





