ಮಂಗಳೂರು : ಭಾರತೀಯ ವಾಯುಪಡೆ ಸಿಬ್ಬಂದಿ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಾವು
ಮಂಗಳೂರು, ಮಾ, 25: ಭಾರತೀಯ ವಾಯುಪಡೆಯ ಸಿಬ್ಬಂದಿಯೊಬ್ಬರು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪಾದಾಚಾರಿಗಳ ಅನುಕೂಲಕ್ಕಿರುವ ರೈಲ್ವೆ ಮೇಲ್ಸೇತುವೆಯಲ್ಲಿ ಆಯ ತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಮೃತಪಟ್ಟ ದುರ್ದೈವಿಯನ್ನು ಕಾಂಞಗಾಡ್‌ನ ಕೊಡತ್ತುವಿನ ಆನಂದಾಶ್ರಮ ನಿವಾಸಿ ಕೆ.ಕೆ ಮನೋಜ್ ಕುಮಾರ್ (33)ಎಂದು ಗುರುತಿಸಲಾಗಿದೆ.
ಮನೋಜ್ ಅವರು ಭಾರತೀಯ ವಾಯುದಳದಲ್ಲಿ ವಿಮಾನ ತಂತ್ರಜ್ಞರಾಗಿ ನಾಸಿಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ನಾಸಿಕ್ ನಿಂದ ಮಂಗಳೂರಿಗೆ ಬಂದಿದ್ದ ಅವರು ಮಂಗಳೂರು ಸೆಂಟ್ರಲ್ ವಿಮಾನ ನಿಲ್ದಾಣದಿಂದ ಕಾಂಞಗಾಡ್ ಗೆ ಇಂದು ಬೆಳಿಗ್ಗೆ 7.50 ರ ರೈಲನ್ನು ಹತ್ತಬೇಕಾಗಿತ್ತು. ಎರಡನೆ ಪ್ಲಾಟ್‌ಫಾರಂನಲ್ಲಿದ್ದ ರೈಲಿನಲ್ಲಿಗೆ ಹೋಗಲು ಅವರು ಲಗೇಜಿನೊಂದಿಗೆ ಒಂದನೆ ಫ್ಲಾಟ್‌ಫಾರಂನಿಂದ ಪಾದಾಚಾರಿ ರೈಲ್ವೆ ಮೇಲ್ಸೆತುವೆಯನ್ನು ಬಳಸಿದ್ದರು. ಈ ಸಂದರ್ಭದಲ್ಲಿ ಮೇಲ್ಸೇತುವೆಯಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಅವರು ಸ್ಥಳದಲ್ಲಿಯೆ ಸಾವನ್ನಪ್ಪಿದರು.
ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.





