ರಾಜು ಹತ್ಯೆ ಬಗ್ಗೆ ಸದನದಲ್ಲಿ ಸುಳ್ಳು ಮಾಹಿತಿ: ಪಿಎಫ್‌ಐ ಖಂಡನೆ
ುಡಿಕೇರಿ, ಮಾ.25: ಇತ್ತೀಚೆಗೆ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಗೆ ಸಂಬಂಧಿಸಿ ಸದನದ ಹೊರಗೆ ಮತ್ತು ಒಳಗೆ ಪಾಪ್ಯುಲರ್ ಫ್ರಂಟ್ ಕೈವಾಡವಿದೆ ಎಂದು ನೇರವಾಗಿ ಅರೋಪಿಸುವ ಮೂಲಕ ಸದನಕ್ಕೆ ತಪ್ಪುಮಾಹಿತಿ ನೀಡಲು ಬಿಜೆಪಿ ಪ್ರಯತ್ನಿಸುತ್ತಿದ್ದು ಇದು ಖಂಡನೀಯವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.
ಹತ್ಯೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವಾಗ ಈ ರೀತಿಯ ಹೇಳಿಕೆ ನೀಡಿ ತನಿಖೆಯ ದಾರಿ ತಪ್ಪಿಸುವುದು ಇದರ ಉದ್ದೇಶವಾಗಿದೆ. ಸದನದಲ್ಲಿ ಬಿಜೆಪಿ ನಾಯಕರು 2009ರ ಮೈಸೂರು ಗಲಭೆಗೆ ಪಾಪ್ಯುಲರ್ ಫ್ರಂಟ್ ಕಾರಣ ಎಂದು ಸುಳ್ಳನ್ನು ಹೇಳಿದ್ದು ಅವರದ್ದೇ ಸರಕಾರ ಇದ್ದಾಗ ಈ ಗಲಭೆೆಗೆ ಮಸೀದಿಗೆ ಹಂದಿ ತಲೆ ಹಾಕಿ ಸಂಚು ರೂಪಿಸಿದ್ದು ಶ್ರೀ ರಾಮ ಸೇನೆ ಎಂಬುದನ್ನು ತನಿಖಾ ವರದಿಗಳು ಬಹಿರಂಗ ಪಡಿಸಿ ಅವರ ನಾಯಕರ ಮೇಲೆ ಪ್ರಕರಣವನ್ನು ದಾಖಲಿಸಲಾಗಿತು.್ತ
ಹೀಗಿದ್ದರೂ ಪಾಪ್ಯುಲರ್ ಪ್ರಂಟ್‌ನ ಹೆಸರನ್ನು ಎಳೆದು ತಂದು ಸದನಕ್ಕೆ ಮತ್ತು ರಾಜ್ಯದ ಜನತೆಗೆ ಸುಳ್ಳು ಮಾಹಿತಿ ನೀಡುತ್ತಿರುವುದು ಖಂಡನೀಯವಾಗಿದೆ. ರಾಜ್ಯದ ಜನತೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಬೇಕಾದ ಬಿಜೆಪಿಯವರು ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸಮಯ ವ್ಯರ್ಥಪಡಿಸುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಉದಾಹರಣೆಯಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದರು.





