ಸಚಿವ ರೈ ನೇತೃತ್ವದ ತಂಡದಿಂದ ದುಬೈ ಪೊಲೀಸ್ ಲೆ. ಜನರಲ್ ಭೇಟಿ

ದುಬೈ, ಮಾ.25: ಎಮಿರೇಟ್ ಆಫ್ ದುಬೈಯ ಪೊಲೀಸ್ ಹೆಡ್ ಲೆಫ್ಟಿನೆಂಟ್‌ಜನರಲ್, ಪೂರ್ವ ಪೊಲೀಸ್ ಮುಖ್ಯಸ್ಥ ಧಾಹಿ ಖಲ್ಫನ್ ತಮೀಮ್ರನ್ನು ಕರ್ನಾಟಕ ಅರಣ್ಯ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ ನೇತೃತ್ವದ ನಿಯೋಗ ಶುಕ್ರವಾರ ಜುಮೈರಾದಲ್ಲಿ ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿತು.
ಈ ವೇಳೆ ಯುಎಇ ಪೊಲೀಸ್ ವ್ಯವಸ್ಥೆ ಮತ್ತು ಕರ್ನಾಟಕ ಪೊಲೀಸ್ ಇಲಾಖೆಯ ಕುರಿತು ಪರಸ್ಪರ ಮಾಹಿತಿ ವಿನಿಮಯ ಸಮಾಲೋಚನೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಭೇಟಿ ನೀಡುವಂತೆ ಧಾಹಿ ಖಲ್ಫನ್ ತಮೀಮ್ರನ್ನು ನಿಯೋಗ ಆಹ್ವಾನಿಸಿತು. ತಮೀಮ್ ತಮ್ಮ ಜುಮೈರಾದ ಅರಮನೆಯಲ್ಲಿ ನಿಯೋಗಕ್ಕೆ ಮಧ್ಯಾಹ್ನದ ಉಪಹಾರ ನೀಡಿ ಸತ್ಕರಿಸಿದರು.
ತಂಡದಲ್ಲಿ ಯೂಸುಫ್ ಅಲ್ ಫಲಾಹ್, ರಶೀದ್ ವಿಟ್ಲ, ಇಕ್ಬಾಲ್ ಮಹರ್‌ಗ್ರೂಪ್, ಅಶ್ರಫ್ ಕಾರ್ಲೆ ಉಪಸ್ಥಿತರಿದ್ದರು.
Next Story





