ದೇವಾಲಯದೊಳಗೆ ಪ್ರವೇಶ
ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ
ನಾಸಿಕ್, ಮಾ.25: ಇಲ್ಲಿನ ತ್ರಂಬಕೇಶ್ವರ ದೇವಾಲಯವನ್ನು ಪ್ರವೇಶಿಸಿದುದಕ್ಕಾಗಿ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿಯವರನ್ನು ಶುಕ್ರವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ದೇವಾಲಯದೊಳಗೆ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ.
ತ್ರಂಬಕೇಶ್ವರ ಭಗವಾನ್ ಶಿವನ ಮಂದಿರದೊಳಗೆ ತಾವು ಪ್ರಾರ್ಥನೆ ಸಲ್ಲಿಸಿದೆವು ಹಾಗೂ ಮಹಿಳೆಯರಿಗೆ ಗರ್ಭಗುಡಿಯೊಳಗೆ ಪ್ರವೇಶ ನೀಡುವಂತೆ ಪ್ರಾರ್ಥನೆ ಮಾಡಿದೆವು. ತಾವು ದೇವಾಲಯದ ಒಳಗಿದ್ದೇವೆ. ಅದೇ ಒಂದು ದೊಡ್ಡ ವಿಷಯವೆಂದು ದೇಸಾಯಿ ಹೇಳಿದರು.
ತೃಪ್ತಿ ದೇಸಾಯಿ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಸ್ಥಳೀಯ ಮಹಿಳೆಯರು ಪ್ರತಿಭಟಿಸಿದರು.
ದೇಸಾಯಿ ಹಾಗೂ ಅವರ ಬೆಂಬಲಿಗರು, ದೇವಾಲಯದ ಗರ್ಭಗುಡಿಯೊಳಗೆ ಮಹಿಳೆಯರಿಗೆ ಪ್ರವೇಶ ನೀಡದಿರುವ ಪ್ರಾಚೀನ ನಿಯಮವನ್ನು ಮುರಿಯುವ ಪಣ ತೊಟ್ಟಿದ್ದರು.
ಆದಾಗ್ಯೂ, ಪರಂಪರೆಯ ಆಧಾರದಂತೆ ದೇವಾಲಯದೊಳಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲ್ಪಟ್ಟಿದೆ. ಈ ವಿಷಯದಲ್ಲಿ ಈ ವರೆಗೆ ಯಾವುದೇ ಆಕ್ಷೇಪ ಕೇಳಿ ಬಂದಿಲ್ಲವೆಂದು ದೇವಾಲಯದ ಆಡಳಿತ ಪ್ರತಿಪಾದಿಸಿಸದೆ.
Next Story





