ಏಸುಕ್ರಿಸ್ತರ ಚಿಂತನೆಯನ್ನು ಸ್ಮರಿಸುವ ದಿನ: ಮೋದಿ
ಹೊಸದಿಲ್ಲಿ, ಮಾ.25 : ಗುಡ್‌ಫ್ರೈಡೆ ಏಸುಕ್ರಿಸ್ತರ ಸಹಾನುಭೂತಿಯ ಚಿಂತನೆ ಮತ್ತು ಪಾವಿತ್ರವನ್ನು ಸ್ಮರಿಸುವ ದಿನ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಗುಡ್‌ಫ್ರೈಡೆ ಪ್ರಾರ್ಥನೆ ಸಲ್ಲಿಸುವುದೆಂದರೆ ಅವರ ಶ್ರೇಷ್ಠ, ಧಾರ್ಮಿಕ, ಮತ್ತು ಸಹಾನುಭೂತಿಯ ಚಿಂತನೆಯನ್ನು ಸ್ಮರಿಸುವ ದಿನವಾಗಿದೆ. ಅವರ ಚಿಂತನೆ ಹಲವು ಜನರ ಬದುಕಿಗೆ ಪ್ರೇರಣೆಯಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಏಸುಕ್ರಿಸ್ತರ ಶಿಲುಬೆಗೇರಿಸಿದ ಸ್ಮರಣಾರ್ಥವಾಗಿ ಕ್ರೈಸ್ತ ಬಾಂಧವರು ಗುಡ್‌ಫ್ರೈಡೆ ದಿನವನ್ನು ಆಚರಿಸುತ್ತಾರೆ.
Next Story





