ವಿದ್ಯಾರ್ಥಿಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ: ವಲೇರಿಯನ್ ರೊಡ್ರಿಗಸ್

ಮಂಗಳೂರು, ಮಾ.25: ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿರುವ ಪ್ರತಿ ವಿದ್ಯಾರ್ಥಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು, ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಸುಧಾರಣಾವಾದಿ ಚಿಂತನೆ ಗಳನ್ನು ಹತ್ತಿಕ್ಕುವುದು ಸರಿಯಲ್ಲ ಎಂದು ಹೊಸದಿಲ್ಲಿ ಜವಾಹರಲಾಲ್ ನೆಹರೂ ವಿವಿಯ (ಜೆಎನ್‌ಯು) ನಿವೃತ್ತ ಪ್ರೊೆಸರ್ ವಲೇರಿಯನ್ ರೊಡ್ರಿಗಸ್ ಹೇಳಿದರು.
ಅವರು ಇಂದು ಜೆಎನ್‌ಯು ಘಟನೆ ಹಿನ್ನೆಲೆಯಲ್ಲಿ ನಗರದ ಶಕ್ತಿನಗದಲ್ಲಿರುವ ಕಲಾಂಗಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀ ಯತೆ’ ಚರ್ಚಾಕಾರ್ಯಕ್ರಮದಲ್ಲಿ ಮಾತನಾ ಡುತ್ತಿದ್ದರು.
ನಾವೆಲ್ಲರೂ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆಯುಳ್ಳವರಾಗಿದ್ದೇವೆ. ಜೆಎನ್‌ಯುವಿನಲ್ಲಿ ವಿವಿಧ ರಾಜ್ಯ, ದೇಶಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿ ದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವಲ್ಲಿ ಈ ವಿಶ್ವ ವಿದ್ಯಾ ನಿಲಯ ಮಹತ್ತರ ಪಾತ್ರ ವಹಿಸುತ್ತದೆ.ವ್ಯವಸ್ಥೆಯಲ್ಲಿನ ತಪ್ಪು-ಒಪ್ಪುಗಳ ಬಗ್ಗೆ ಧ್ವನಿ ಎತ್ತಿದಾಗ ಅದನ್ನು ತಡೆಯುವುದು ಉತ್ತಮ ಕೆಲಸವಲ್ಲ ಎಂದವರು ಹೇಳಿದರು.
ಪ್ರಸಕ್ತ ಸನ್ನಿವೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರ ಚಿಂತನೆಯ ಪ್ರಜಾಪ್ರಭುತ್ವ ಮಾತ್ರವೇ ರಾಷ್ಟ್ರೀಯತೆಯಾಗಿದ್ದು, ಸಾಮಾನ್ಯ ವ್ಯಕ್ತಿಯನ್ನು ಹಸಿವು, ಜಾತೀಯತೆ, ಮತೀಯ ವಾದದಿಂದ ಮುಕ್ತಗೊಳಿಸುವುದೇಆಝಾದಿ (ಸ್ವಾತಂತ್ರ) ಎಂದವರು ವ್ಯಾಖ್ಯಾನಿಸಿದರು. ಜೆಎನ್‌ಯು ಒಂದು ಶೈಕ್ಷಣಿಕ ಸಂಸ್ಥೆ ಎಂದು ಬಣ್ಣಿಸಿದ ಅವರು, 2003ರಲ್ಲಿ ಜೆಎನ್‌ಯುಗೆ ಸೇರಿದ ತಾನು ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥ ಸೇರಿದಂತೆ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ.
ಅಲ್ಲಿಗೆ ಬರುವ ವಿದ್ಯಾರ್ಥಿಗಳು ಬುದ್ಧಿವಂತರು ಮಾತ್ರವಲ್ಲ, ದೇಶದಲ್ಲಿ ಸಮಗ್ರ ಬದಲಾವಣೆಯನ್ನು ಬಯಸುವವರಾಗಿದ್ದಾರೆ. ಜೆಎನ್‌ಯುನಲ್ಲಿ 9,000ದಷ್ಟು ವಿದ್ಯಾರ್ಥಿಗಳಿದ್ದಾರೆ ಎಂದವರು ತಿಳಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝಾರಿಯೊ ಉಪಸ್ಥಿತರಿದ್ದರು.







