ಸಾನಿಯಾ-ಹಿಂಗಿಸ್ ಶುಭಾರಂಭ
ಮಿಯಾಮಿ ಓಪನ್ ಟೆನಿಸ್ ಟೂರ್ನಿ
ಮಿಯಾಮಿ, ಮಾ.25: ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಅವರ ಸ್ವಿಸ್ ಜೊತೆಗಾರ್ತಿ ಮಾರ್ಟಿನಾ ಹಿಂಗಿಸ್ ಶುಭಾರಂಭ ಮಾಡಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್‌ನ ಮೊದಲ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ ಹಾಗೂ ಹಿಂಗಿಸ್ ಸ್ಪೇನ್‌ನ ಲಾರಾ ಅರುಯಾಬರೆನಾ ಹಾಗೂ ರಾಲುಕ್ವಾ ಒಲಾರು ಅವರನ್ನು 6-0, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.
ಇದೇ ವೇಳೆ, ರೋಹನ್ ಬೋಪಣ್ಣ ಹಾಗೂ ರೊಮಾನಿಯದ ಫ್ಲಾರಿನ್ ಮೆರ್ಗಿಯಾ ಉರುಗ್ವೆ-ಸ್ಪೇನ್ ಜೋಡಿ ಪುರುಷರ ಡಬಲ್ಸ್‌ನಲ್ಲಿ ಪಾಬ್ಲೊ ಕ್ಯುವಾಸ್ ಹಾಗೂ ಮಾರ್ಸೆಲ್ ಗ್ರಾನೊಲ್ಲರ್ಸ್ ವಿರುದ್ಧ 6-2, 4-6, 4-10 ಸೆಟ್‌ಗಳ ಅಂತರದಿಂದ ಶರಣಾಗಿ ಟೂರ್ನಿಯಿಂದ ಹೊರ ನಡೆದರು.
Next Story





