ಉಡುಪಿ: 1.98 ಕೋ.ರೂ. ವೆಚ್ಚದಲ್ಲಿ ವಿಂಡ್ ರೋ ಪ್ಲಾಟ್‌ಫಾರಂ ನಿರ್ಮಾಣ
ಉಡುಪಿ, ಮಾ.25: ಅಲೆವೂರಿನ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 1.98 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿಯಾಗಿ ವಿಂಡ್ ರೋ ಕಾಂಪೋಸ್ಟ್ ಯಾರ್ಡ್ ನಿರ್ಮಿಸ ಲಾಗುವುದು ಎಂದು ಉಡುಪಿ ಜಿಲ್ಲಾಕಾರಿ ಹಾಗೂ ನಗರಸಭೆ ಆಡಳಿತಾಕಾರಿ ಡಾ. ವಿಶಾಲ್ ಆರ್. ತಿಳಿಸಿದ್ದಾರೆ.
ಉಡುಪಿ ನಗರಸಭೆಯಲ್ಲಿ ಇತ್ತೀಚೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ುಪಿಯ ಬೀಡಿನಗುಡ್ಡೆಯಲ್ಲಿ ನಿರ್ಮಾಣವಾಗುತ್ತಿರುವ ಬಯೋಮಿಥನಿ ಕೇಶನ್ ಘಟಕದ ಕಾಮಗಾರಿಯನ್ನು ಶೀಘ್ರ ದಲ್ಲಿ ಪೂರ್ಣಗೊಳಿಸಬೇಕು. ನಗರಸಭೆಯ ಕಸ ಸಂಗ್ರಹಣೆ, ಸಾಗಾಣೆೆ ಮತ್ತು ಹೊರ ಗುತ್ತಿಗೆ ಆಧಾರದ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ಟೈಮರ್ ಜಿಪಿಎಸ್ ಅಳವ ಡಿಸಿ, ವಾಹನಗಳ ಓಡಾಟವನ್ನು ಪರೀಕ್ಷಿಸಿ ಬಿಲ್ ಪಾವತಿಸಬೇಕು ಎಂದು ಅವರು ಅ ಕಾರಿಗಳಿಗೆ ಸೂಚಿಸಿದರು.
ನಗರಸಭೆಯ ಎಲ್ಲಾ ಯೋಜನೆಗಳ ಕ್ರಿಯಾ ಯೋಜನೆಗಳನ್ನು ತಯಾರಿಸುವ ಸಂದಭರ್ದಲ್ಲಿಯೇ ಸಂಬಂಧಪಟ್ಟ ಜಾಗದ ತಕರಾರು ವ್ಯಾಜ್ಯಗಳಿದ್ದರೆ ಅವು ಗಳನ್ನು ಕೈಬಿಟ್ಟು ಕ್ರಿಯಾ ಯೋಜನೆ ತಯಾರಿಸಬೇಕು. ಇಲ್ಲವಾದಲ್ಲಿ ವರ್ಷದ ಅಂತ್ಯದವರೆಗೂ ಕ್ರಿಯಾ ಯೋಜನೆಯಲ್ಲಿ ಬದಲಾವಣೆ ಆಗುತ್ತಿರುತ್ತವೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಕ್ರಿಯಾ ಯೋಜನೆಗಳಲ್ಲಿ ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಅಲ್ಲದೇ ಇನ್ನು ಮುಂದೆ ಯಾವುದೇ ಕಾಮಗಾರಿಗಳನ್ನು ಮುಂಗ ಡವಾಗಿ ನಡೆಸಬಾರದು ಎಂದು ಅವರು ತಿಳಿಸಿದರು. ನಲ್ಮ್ ಯೋಜನೆಯ ಸ್ಟ್ರೀಟ್ ವೆಂಡರ್ ರೆನ್‌ಗೆ ಸ್ಥಳ ಗುರುತಿಸಲಾಗಿದ್ದು, ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಅಡೆತಡೆಯಾಗದಂತೆ ವೆಂಡಿಂಗ್ ರೆನ್ ಗುರುತಿಸಿ ನಿರ್ಮಿಸಬೇಕು ಎಂದರು. ುಪಿ ಉತ್ಸವದ 2014-15 ಮತ್ತು 2015-16ನೆ ಸಾಲಿನ ಮೊತ್ತ ವನ್ನು ಜಿಲ್ಲಾಸ್ಪತ್ರೆಗೆ ನೀಡಲಾಗಿದೆ ಎಂದು ಅಕಾರಿಗಳು ಸಭೆಗೆ ಮಾಹಿತಿ ನೀಡಿ ದರು. ಅದೇ ರೀತಿ 2010, 2011 ಹಾಗೂ 2012ನೆ ಸಾಲಿನ ಮೊತ್ತವನ್ನು ಕೂಡಾ ಆಸ್ಪತ್ರೆಗೆ ನೀಡಬೇಕು ಎಂದು ಆಡಳಿತಾಕಾರಿ ತಿಳಿಸಿದರು.ುಪಿ ನಗರಸಭೆೆಯ ಕಟ್ಟಡದಲ್ಲಿ ಸ್ಥಳಾ ವಕಾಶದ ಕೊರತೆಯಿರುವುದರಿಂದ ಈ ಹಿಂದೆ ತಾಲೂಕು ಕಚೇರಿಯಲ್ಲಿದ್ದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವ ಕುರಿತಂತೆ ಮತ್ತು ಕಟ್ಟಡದ ವಿನ್ಯಾಸ ಮತ್ತು ಲೈನ್ ಎಸ್ಟಿಮೇಟ್ ಮಾಡಲು ಇಂಜಿನಿಯರ್‌ಗಳಿಗೆ ಅವರು ಸೂಚಿಸಿದರು. ಉಡುಪಿ ಪೌರಾಯುಕ್ತ ಡಿ.ಮಂಜುನಾಥಯ್ಯ ಮೊದಲಾದ ಅಕಾರಿ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.





