ಲಿಬಿಯದಲ್ಲಿ ಮಿಸೈಲ್ ದಾಳಿ: ಕೇರಳದ ತಾಯಿ-ಮಗು ಬಲಿ

ಕೋಟ್ಟಯಂ: ಲಿಬಿಯದಲ್ಲಿ ನಡೆದ ಮಿಸೈಲ್ ದಾಳಿಯಲ್ಲಿ ಕೇರಳ ಮೂಲದ ತಾಯಿ ಮಗು ಸಾವನ್ನಪ್ಪಿದ್ದಾರೆ.
ಕೋಟ್ಟಯಂ ವೆಳಿಯನ್ನೂರ್ ತುಳಸಿ ಭವನದ ನಿವಾಸಿ ವಿಪಿನ್ ಕುಮಾರ್ ಎಂಬವರ ಪತ್ನಿ ಸುನು ಹಾಗೂ ಮಗ ಪ್ರಣವ್ ಸಾವನಪ್ಪಿದವರು.
ಲಿಬಿಯದಲ್ಲಿ ಇವರು ವಾಸಿಸುತ್ತಿದ್ದ ಮನೆಯ ಮೇಲೆ ಮಿಸೈಲ್ ದಾಳಿ ನಡೆದಿದ್ದರಿಂದ ಇಬ್ಬರೂ ಸಾವನ್ನಪ್ಪಿದ್ದಾರೆ. ಭಾರತೀಯ ಕಾಲಮಾನ ಕಳೆದ ರಾತ್ರಿ ಎಂಟು ಗಂಟೆಯ ಸುಮಾರಿಗೆ ದಾಳಿ ನಡೆದಿದೆ.
ಲಿಬಿಯದಲ್ಲಿ ಐಸಿಸ್ ಉಗ್ರರ ದಾಳಿಯನ್ನು ತಡೆಯಲು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಮಿಸೈಲ್ ದಾಳಿ ನಡೆಸುತ್ತಿವೆ.
Next Story





