ಇನ್ನು ವಲಸಿಗರಿಗೆ ಪಬ್ಲಿಕ್ ಡ್ರೈವರ್ ವೀಸಾ ಇಲ್ಲ
ವಲಸಿಗರನ್ನು ಹೊರದಬ್ಬಲು ಸೌದಿ ಪಣ
.jpg)
ಜಿದ್ದಾ :ಸೌದೀಕರಣವನ್ನು ಉತ್ತೇಜಿಸುವ ಸಲುವಾಗಿ ಇಲ್ಲಿನ ಸರಕಾರ ಇನ್ನು ಮುಂದೆ ವಲಸಿಗರಿಗೆ ಪಬ್ಲಿಕ್ ಡ್ರೈವರ್ ವೀಸಾ ನೀಡಲಾಗುವುದಿಲ್ಲವೆಂದು ಹೇಳಿದೆ. ದೇಶದ ಕಾರ್ಮಿಕ ಹಾಗೂ ಸಾರಿಗೆ ಸಚಿವಾಲಯಗಳು ಈ ನಿಟ್ಟಿನಲ್ಲಿಒಪ್ಪಂದವೊಂದಕ್ಕೆ ಬಂದಿದ್ದು ಸಾರಿಗೆ ಕ್ಷೇತ್ರದಲ್ಲೂ ಸೌದೀಕರಣಕ್ಕೆ ಒತ್ತು ನೀಡಲಾಗುತ್ತಿದೆಯೆಂಬುದು ಇದರಿಂದ ಸ್ಪಷ್ಟವಾಗಿದೆ.
ಬಾಡಿಗೆ ಕಾರುಗಳ ಉದ್ಯಮವನ್ನೂ ಸಾರಿಗೆ ಚಟುವಟಿಕೆಯೆಂದೇ ಪರಿಗಣಿಸಬೇಕೆಂದುಎರಡೂ ಸಚಿವಾಲಯಗಳು ನಿರ್ಧರಿಸಿದ್ದು ಸಾರಿಗೆ ಕ್ಷೇತ್ರದ ಅಗತ್ಯಗಳ ಬಗ್ಗೆ ಅಧ್ಯಯನ ನಡೆಸಲೂ ನಿರ್ಧರಿಸಲಾಗಿದೆ.
ಸಾರಿಗೆ ಕ್ಷೇತ್ರಕ್ಕೆ ಸಂಬಂಧ ಪಟ್ಟ ಹಾಗೂಸಾರ್ವಜನಿಕ ಸಾರಿಗೆ ಮತ್ತು ಸರಕು ಸಾಗಾಟದ ಎಲ್ಲಾ ವಿಚಾರಗಳಲ್ಲೂ ಎರಡೂ ಸಚಿವಾಲಯಗಳ ನಡುವೆ ಒಮ್ಮತಮೂಡುವಂತೆ ಕೂಡ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
Next Story





