ಮಾ.27: ಬೋಳಿಯಾರಿನಲ್ಲಿ ಝೈನುಲ್ ಉಲಮಾ ಅನುಸ್ಮರಣೆ
 123.jpg)
ಮುಡಿಪು, ಮಾ.26: ಸಜೀಪ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್‌ಮೆಂಟ್ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಸಮಸ್ತ ಕಾರ್ಯದರ್ಶಿ ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ರವರ ಅನುಸ್ಮರಣಾ ಸಮಾರಂಭವು ಬೋಳಿಯಾರು ಕೇಂದ್ರ ಮಸೀದಿ ವಠಾರದಲ್ಲಿ ಮಾ.27ರಂದು ಸಂಜೆ 5 ಗಂಟೆಗೆ ರೇಂಜ್ ಅಧ್ಯಕ್ಷ ಕೆ.ಬಿ. ಅಬ್ದುಲ್ ಖಾದರ್ ದಾರಿಮಿ ಅಧ್ಯಕ್ಷತೆಯಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಮಿತ್ತಬೈಲು ಅಬ್ದುಲ್ ಜಬ್ಬಾರ್ ಉಸ್ತಾದ್ ಉದ್ಘಾಟಿಸುವರು.
ಪ್ರಖ್ಯಾತ ವಾಗ್ಮಿ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಭಾಷಣ ಮಾಡಲಿದ್ದು, ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ದುವಾಶೀರ್ವಚನ ನೀಡಲಿದ್ದಾರೆ.
ರೇಂಜ್ ಮದ್ರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಎಸ್. ಅಬ್ಬಾಸ್ ಹಾಜಿ ಸಜೀಪ, ಗೌರವಾಧ್ಯಕ್ಷ ಎಸ್. ಅಬ್ದುರ್ರಝಾಕ್ ಹಾಜಿ ಸಜೀಪ, ಪ್ರ. ಕಾರ್ಯದರ್ಶಿ ಸಾಹುಲ್ ಹಮೀದ್ ನಂದಾವರ, ಬೋಳಿಯಾರು ಖತೀಬ್ ಕೆ.ಎಸ್. ಅಹ್ಮದ್ ದಾರಿಮಿ, ಎಸ್.ಕೆ.ಜೆ.ಎಮ್.ಸಿ.ಸಿ. ಆರ್.ಪಿ ಅಬೂಬಕರ್ ರಿಯಾಝ್ ರಹ್ಮಾನಿ, ಎಸ್ಕೆಐಎಂವಿಬಿ ತಪಾಸಣಾಧಿಕಾರಿ ರಶೀದ್ ಮುಸ್ಲಿಯಾರ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ರೇಂಜ್ ಪ್ರ. ಕಾರ್ಯದರ್ಶಿ ಕೆ.ಯು. ಅಬ್ದುಲ್ ಮಜೀದ್ ಫೈಝಿ ಕೋಲ್ಪೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





