ನಿರಾಶ್ರಿತರನ್ನು ‘ಅಸಡ್ಡೆ’ಯಿಂದ ಕಾಣುತ್ತಿರುವ ಯುರೋಪ್ ದೇಶಗಳನ್ನು ಟೀಕಿಸಿದ ಪೋಪ್

ರೋಮ್ : ನಿರಾಶ್ರಿತರು ಹಾಗೂ ವಲಸಿಗರ ಬಗ್ಗೆ ಯುರೋಪ್ ತಳದಿರುವ ‘ಅಸಡ್ಡೆ’ಯ ಧೋರಣೆಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿರುವ ಪೋಪ್ ಫ್ರಾನ್ಸಿಸ್ ಬಾಲಕಾಮಿ ಪಾದ್ರಿಗಳು, ಶಸ್ತ್ರಾಸ್ತ್ರ ವ್ಯಾಪಾರಿಗಳು, ಮೂಲಭೂತವಾದಿಗಳು ಹಾಗೂ ಧರ್ಮ ನಿಂದಕರನ್ನೂ ತೀವ್ರವಾಗಿ ಟೀಕಿಸಿದರು.
ಕೆಟ್ಟ ಸ್ಥಿತಿಯಲ್ಲಿರುವ ದೋಣಿಗಳಲ್ಲಿಗ್ರೀಸ್ ಹಾಗೂ ಯುರೋಪಿನ ಇತರದೇಶಗಳಿಗೆ ಸಾಗಿ ಬರುತ್ತಿರುವ ನಿರಾಶ್ರಿತರು ಹಾಗೂ ವಲಸಿಗರು ಎದುರಿಸುತ್ತಿರುವ ಘೋರ ಸಮಸ್ಯೆಯನ್ನುಗಮನದಲ್ಲಿರಿಸಿಕೊಂಡು ಪೋಪ್ ಯುರೋಪಿನ ‘ಅಸಡ್ಡೆ’ ಧೋರಣೆಯ ಬಗ್ಗೆಗುಡ್ ಫ್ರೈಡೇ ದಿನ ಸಾವಿರಾರು ಜನರು ಭಾಗವಹಿಸಿದ್ದ ಸಮಾರಂಭದಲ್ಲಿ ಉಲ್ಲೇಖಿಸಿದ್ದರು.
ನಿರಾಶ್ರಿತರಿಗೆ ತಮ್ಮ ದೇಶದ ಬಾಗಿಲುಗಳನ್ನು ತೆರೆಯಬೇಕೆಂದು ಪೋಪ್ ಈ ಹಿಂದೆಯೇ ವಿಶ್ವದ ದೇಶಗಳಿಗೆ ಕರೆ ನೀಡಿದ್ದರು. ಗ್ರೀಸಿನಿಂದ ವಲಸಿಗರನ್ನು ಹೊರಹಾಕಬೇಕೆಂದು ಟರ್ಕಿ ಹಾಗೂ ಯುರೋಪ್ ನಡುವೆ ನಡೆದ ವಿವಾದಾಸ್ಪದ ಒಪ್ಪಂದದ ಹಿನ್ನೆಲೆಯಲ್ಲಿ ಪೋಪ್ ಅವರ ಹೇಳಿಕೆ ಮಹತ್ವ ಪಡೆದಿದೆ.
ಇತ್ತೀಚಿಗಿನ ಬ್ರಸ್ಸೆಲ್ಸ್ ದಾಳಿಯನ್ನು ಉಲ್ಲೇಖಿಸಿದ ಪೋಪ್ ಧರ್ಮದ ಹೆಸರಿನಲ್ಲಿಹಿಂಸೆಗೆ ಸಮರ್ಥನೆಯಿಲ್ಲವೆಂದು ಹೇಳಿದರು.





