ಕ್ಷಣಗಳ ಮೊದಲು fly dubai ವಿಮಾನದೊಳಗಿನಿಂದ ಕೇಳಿದ್ದೇನು ಗೊತ್ತೆ ?
ಫ್ಲೈ ದುಬೈ ವಿಮಾನಾಪಘಾತ

ಮಾಸ್ಕೊ, ಮಾ.26: ಕಳೆದ ವಾರ ರೋಸ್ತೊವ್-ಆನ್-ಡಾನ್‌ನಲ್ಲಿ ಅಪಘತಕ್ಕೀಡಾಗಿ 62 ಪ್ರಯಾಣಿಕರ ಸಾವಿಗೆ ಕಾರಣವಾದ ಫ್ಲೈ ದುಬೈ ಪ್ರಯಾಣಿಕರ ವಿಮಾನದ ಪೈಲಟ್‌ಗಳ ಕೊನೆಯ ಮಾತುಗಳನ್ನು ರಶ್ಯದ ಸರಕಾರಿ ಟ.ವಿ. ಪ್ರಸಾರ ಮಾಡಿದ್ದು, ಅಪಘಾತಕ್ಕೆ ಪೈಲಟ್‌ಗಳ ತಪ್ಪೇ ಕಾರಣವೆಂದು ಸೂಚಿಸಿದೆ.
737 ಬೋಯಿಂಗ್ ನೆಲಕ್ಕಪ್ಪಳಿಸುವ ನಿಮಿಷಕ್ಕೆ ಮೊದಲು, ವಿನಿಮಯವಾದ ಕೊನೆಯ ಮಾತುಗಳ ದಾಖಲೆಯನ್ನು, ವಿಮಾನದ ಧ್ವನಿ ದಾಖಲೆಯು ಲಭ್ಯವಿರುವ ತನಿಖೆ ಆಯೋಗದ ಮೂಲವೊಂದರಿಂದ ತಾನು ಪಡೆದಿದ್ದೇನೆಂದು ರಶ್ಯದ ರೊಸಿಯ-1 ವಾಹಿನಿಯ ಶುಕ್ರವಾರ ರಾತ್ರಿ ಹೇಳಿದೆ.
ಕಳೆದ ಶನಿವಾರ, ದುಬೈಯಿಂದ ಆಗಮಿಸಿದ್ದ ಈ ನತದೃಷ್ಟ ವಿಮಾನ, ದಕ್ಷಿಣ ರಶ್ಯದ ನಗರದಲ್ಲಿ ಭಾರೀ ಗಾಳಿ ಮತ್ತು ಮಳೆಯಿಂದಾಗಿ ರನ್ವೇ ಗೊಚರಿಸದೆ ಇಳಿಯಲು ವಿಫಲವಾಗಿ, ಎರಡನೆ ಪ್ರಯತ್ನದಲ್ಲಿ ನೆಲಕ್ಕಪ್ಪಳಿಸಿ ಸ್ಪೋಟಗೋಂಡು ಬೆಂಕಿಯ ಚೆಂಡಾಗಿತ್ತು.
ಆಟೋ ಪೈಲಟನ್ನು ಸ್ವಿಚ್ ಆಫ್ ಮಾಡಿದೊಡನೆಯೇ ಪೈಲಟ್ ವಿಮಾನದ ಧ್ವನಿ ದಾಖಲೆ ಸೂಚಿಸುತ್ತಿದೆ.
ರಶ್ಯನ್ ಭಾಷೆಗೆ ತರ್ಜುಮೆ ಮಾಡಲಾದ ಆ ದಾಖಲೆಯಲ್ಲಿ ಪೈಲಟ್ ಮತ್ತೆ ಮತ್ತೆ ಚಿಂತಿಸಬೇಡಿ ಎನ್ನುತ್ತಿದ್ದನ್ನು. ಸೆಂಕೆಂಡಿನ ಬಳಿಕ ಅದನ್ನು ಮಾಡಬೇಡಿ ಎಂದಿದ್ದನು. ಮೇಲಕ್ಕೆ ಎತ್ತಿ ಎಂಬ ಪುನರಾವರ್ತಿತ ಮಾತು ಚಾಲಕನ ಕೊನೆಯ ಮಾತಾಗಿತ್ತು.
ವಿಮಾನ ಕೆಳಗೆ ಬೀಳುತ್ತಿದ್ದ ಕೊನೆಯ 6 ಸೆಂಕೆಂಡ್‌ಗಳಲ್ಲಿ ಕೇವಲ ೞಅಮಾನುಷ ಚೀರಾಟೞಮಾತ್ರ ಕೇಳಿಸಿದೆಯೆಂದು ವಾಹಿನಿಯ ಮೂಲಗಳು ತಿಳಿಸಿವೆ.
ಚಾಲಕನು ವಿಮಾನವನ್ನು ಸಮಾನಾಂತರ ಸ್ಥಿತಿಗೆ ಹಿಂದಕ್ಕೆಳೆಯುವುದಕ್ಕಾಗಿ ಬಾಲದಲ್ಲಿನ ಸ್ಥಿರಗೊಳಿಸುವ ರೆಕ್ಕೆಯನ್ನು ಆಕಸ್ಮಿಕವಾಗಿ ಸ್ವಿಚ್ ಆನ್ ಮಾಡಿದ್ದನೆಂದು ಪರಿಣತರನ್ನು ಲ್ಲೇಖಿಸಿ ವಾಹಿನಿ ಹೀಳಿದೆ. ಆದರೆ, ಇದು ಅಧಿಕೃತ ಹೇಳಿಕೆಯಲ್ಲವೆಂದು ಅದು ಒತ್ತಿ ಹೀಳಿದೆ.
ಈ ರೆಕ್ಕೆ ಸಕ್ರಿಯವಾದಾಗ, ವಿಮಾನವು ಪ್ರಾಯೋಗಿಕವಾಗಿ ಪೈಲಟ್‌ನ ನಿಯಂತ್ರಣ ಫಲಕಕ್ಕೆ ಪ್ರತಿಕ್ರಿಯಿಸುವುದಿಲ್ಲವೆಂದು ವಾಹಿನಿ ತಿಳಿಸಿದೆ. ವಿಮಾನವು ನೇರವಾಗಿ ಕೆಳಗೆ ಜಾರಿದುದಕ್ಕೆ ಸ್ಟೆಬಿಲೈಜರ್ ಕಾರಣವೆಂಬುದನ್ನು ಪೈಲಟ್‌ಗಳು ಸ್ಪಷ್ಟವಾಗಿ, ಅರ್ಥ ಮಾಡಿಕೊಂಡಿರಲಿಲ್ಲ.
ಚಾಲಕನು ೞದೀರ್ಘ ಆಯಾಸದಿಂದಾಗಿೞಪ್ರಮಾದದಿಂದ ರೆಕ್ಕೆಯನ್ನು ಸಕ್ರಿಯಗೊಳಿಸುವ ಸ್ವಿಚ್ ಅದುಮಿರ ಬಹುದೆಂದು ವಾಹಿನಿ ಹೇಳಿದೆ.
ವಿಮಾನದ ಸ್ವಯಂ ಚಾಲಿತ ವ್ಯವಸ್ಥೆಗಳಲ್ಲಿ ಅಭೂತಪೂರ್ವ ತಪ್ಪು ಇನ್ನೊಂದು ಸಂಭಾವ್ಯ ವಿವರಣೆಯಾಗಿದೆಯೆಂದು ಅದು ತಿಳಿಸಿದೆ.
55 ಪ್ರಾಯಣಿಕರು ಹಾಗೂ 7 ಮಂದಿ ಸಿಬ್ಬಂದಿಯ ಸಾವಿಗೆ ಕಾರಣವಾದ ವಿಮಾನ ಅಪಘಾತಕ್ಕೆ, ಪ್ರತಿಕೂಲ ಹವಮಾನ, ಪೈಲಟ್‌ಗಳ ತಪ್ಪು ಅಥವಾ ತಾಂತ್ರಿಕ ದೋಷ ಕಾರಣವೇ ಎಂಬ ಬಗ್ಗೆ ತನಿಖೆದಾರರು ಕ್ರಿಮಿನಲ್ ತನಿಖೆ ನಡೆಸುತ್ತಿದ್ದಾರೆ.







