ಬಾಲ್ಕಿಯಲ್ಲಿ ಕೋಮು ಘರ್ಷಣೆ: ಪರಿಸ್ಥಿತಿ ಉದ್ವಿಗ್ನ, ನಿಷೇಧಾಜ್ಞೆ
ಬೀದರ್, ಮಾ.26: ಹೋಳಿ ಹಬ್ಬದ ವೇಳೆ ಎರಡು ಕೋಮಿನ ನಡುವೆ ಘರ್ಷಣೆ, ಕಲ್ಲು ತೂರಾಟ ನಡೆದ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ಪಟ್ಟಣದ ಗಡಿ ಹತ್ತಿರ ನಡೆದಿದ್ದು, ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಪೊಲೀಸರು ಗುಂಪು ಚದುರಿಸಲು ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಎಎಸ್‌ಐ, ಮೂವರು ಕಾನ್‌ಸ್ಟೆಬಲ್ ಸೇರಿ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಪೊಲೀಸರು ಗುಂಪು ಚದುರಿಸಲು ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಎಎಸ್‌ಐ, ಮೂವರು ಕಾನ್‌ಸ್ಟೆಬಲ್ ಸೇರಿ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಎಸ್ಪಿಪ್ರಕಾಶ ನಿಕಮ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಪಟ್ಟಣದಲ್ಲಿ ಠಿಕಾಣಿ ಹೂಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈಶಾನ್ಯ ವಲಯ ಐಜಿಪಿ ಬಿ. ಶಿವಕುಮಾರ ಪಟ್ಟಣ್ಕಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಆಯಕಟ್ಟಿನ ಜಾಗಗಳಲಿ ್ಲ ಡಿಎಆರ್, ಕೆಎರ್ಸ್ಸಾಪಿ ತಂಡಗಳನ್ನು ನೇಮಿಸಲಾಗಿದೆ.
ಕಿಡಿಗೇಡಿಗಳ ಗುಂಪೊಂದು ಪಕ್ಕದ ಬಸ್ ನಿಲ್ದಾಣಕ್ಕೆ ನುಗ್ಗಿ, ಅಲ್ಲಿ ನಿಂತಿದ್ದ 15ಕ್ಕೂ ಅಧಿಕ ಸಾರಿಗೆ ಸಂಸ್ಥೆ ಬಸ್‌ಗಳ ಮೇಲೆ ಕಲ್ಲು ತೂರಿ ಗಾಜು ಪುಡಿ ಮಾಡಿದೆ. ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್, ಬೇಕರಿ ಅಂಗಡಿಗಳಲ್ಲಿ ದಾಂಧಲೆ ನಡೆಸಿದ್ದಾರೆ. ಅಲ್ಲದೇ ಅಂಗಡಿಗಳ ಮಾಲಕರಿಗೂ ಥಳಿಸಿರುವುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಪಟ್ಟಣದಲ್ಲಿ ಎರಡು ದಿನ ಹೋಳಿ ಹಬ್ಬ ನಡೆಯುತ್ತದೆ. ಗುರುವಾರ ರಂಗಿನಾಟದ ವೇಳೆ ಪುರಸಭೆ ಎದುರಿನ ಪ್ರಾರ್ಥನಾ ಮಂದಿರದ ಗೋಡೆ ಮೇಲೆ ಬಣ್ಣ ಹಾಕಲಾಗಿತ್ತು. ಇದಕ್ಕೆ ಆಕ್ಷೇಪಿಸಿದ ಒಂದು ಗುಂಪು, ಈ ಬಗ್ಗೆ ಠಾಣೆಗೆ ದೂರು ನೀಡಿತ್ತು. ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದರು. ಈ ಮಧ್ಯೆ ಮತ್ತೊಂದು ಗುಂಪೊಂದು ಬಣ್ಣದ ಬಂಡಿಯೊಂದಿಗೆ ಈ ಪ್ರಾರ್ಥನಾ ಮಂದಿರದ ಹತ್ತಿರ ಬಂದಿದೆ. ಆಗ ಈ ಗುಂಪಿಗೂ ಮತ್ತೊಂದು ಗುಂಪಿಗೂ ವಾಗ್ವಾದವಾಗಿ ಘರ್ಷಣೆ ಉಂಟಾಗಿದೆ ಎನ್ನಲಾಗಿದೆ.
ಪಟ್ಟಣದಲ್ಲಿ ಎರಡು ದಿನ ಹೋಳಿ ಹಬ್ಬ ನಡೆಯುತ್ತದೆ. ಗುರುವಾರ ರಂಗಿನಾಟದ ವೇಳೆ ಪುರಸೆಎದುರಿನಪ್ರಾರ್ಥನಾಮಂದಿರದಗೋಡೆಮೇಲೆಬಣ್ಣಹಾಕಲಾಗಿತ್ತು.ಇದಕ್ಕೆಆಕ್ಷೇಪಿಸಿದಒಂದುಗುಂಪು,ಈಬಗ್ಗೆಠಾಣೆಗೆದೂರುನೀಡಿತ್ತು.ಪೊಲೀಸರುಮೂವರನ್ನುವಶಕ್ಕೆಪಡೆದಿದ್ದರು.ಈಮ್ಯೆ ಮತ್ತೊಂದು ಗುಂಪೊಂದು ಬಣ್ಣದ ಬಂಡಿಯೊಂದಿಗೆ ಈ ಪ್ರಾರ್ಥನಾ ಮಂದಿರದ ಹತ್ತಿರ ಬಂದಿದೆ. ಆಗ ಈ ಗುಂಪಿಗೂ ಮತ್ತೊಂದು ಗುಂಪಿಗೂ ವಾಗ್ವಾದವಾಗಿ ಘರ್ಷಣೆ ಉಂಟಾಗಿದೆ ಎನ್ನಲಾಗಿದೆ. ಗುರುವಾರವೇ ಎರಡು ಕೋಮಿನ ನಡುವೆ ವೈಮನಸ್ಸಿನ ಕಿಡಿ ಹೊತ್ತಿತ್ತು. ಇದು ಗೊತ್ತಿದ್ದರೂ ಪೊಲೀಸರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಘರ್ಷಣೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿವೆ.





