Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಲ್ಲದ ಪರಭಾರೆ

ಸಲ್ಲದ ಪರಭಾರೆ

ವಾರ್ತಾಭಾರತಿವಾರ್ತಾಭಾರತಿ26 March 2016 11:52 PM IST
share
ಸಲ್ಲದ ಪರಭಾರೆ

ಭಾರತೀಯ ವರ್ಣ ಚಿತ್ರ ಕಲೆಯ ‘ರಸ ಋಷಿ’ ಎಂದೇ ಕಲಾ ಇತಿಹಾಸದಲ್ಲಿ ದಾಖಲಾಗಿರುವ ಹೆಸರು. ಈ ಮಹಾನ್ ಕಲಾವಿದನ ಸ್ಮರಣಾರ್ಥ, ಕರ್ನಾಟಕ ಸರಕಾರ ಸ್ಥಾಪಿಸಿರುವ ವೆಂಕಟಪ್ಪ ಆರ್ಟ್ ಗ್ಯಾಲರಿ ಇಂದು ವಿವಾದದ ಬಿಂದು. ಇದು, ಖ್ಯಾತನಾಮರು ಉದಯೋನ್ಮುಖರೂ ಸೇರಿದಂತೆ ಎಲ್ಲ ಕಲಾವಿದರಿಗೂ ಅಧ್ಯಯನ ಮತ್ತು ಪ್ರದರ್ಶನಗಳಿಗೆ ಆಶ್ರಯತಾಣವಾದ ತೌರು ಮನೆಯಾದರೆ ಕಲಾರಸಿಕರಿಗೆ ಇದೊಂದು ಕಲಾ ದೇಗುಲ. ಈಗ ಕರ್ನಾಟಕದ ಕಲಾವಿದರಿಗೆ, ಈ ತೌರಿನ ಸಂಬಂಧ ಕಡಿದು ಹೋದೀತು ಎಂಬ ಆತಂಕ. ಹೀಗೇಕೆ?
ಅದಕ್ಕೂ ಮುನ್ನ ಈ ತಲೆಮಾರಿನ ಓದುಗರು ಕೇಳಬಹುದಾದ ಪ್ರಶ್ನೆ: ಯಾರು ಈ ವೆಂಕಟಪ್ಪ? ಏನಿದು ಆರ್ಟ್ ಗ್ಯಾಲರಿಯ ವಿವಾದ?

 ಮೈಸೂರಿನಲ್ಲಿ ಜನಿಸಿದ ಕೆ.ವೆಂಕಟಪ್ಪನವರಿಗೆ(1887-1963) ಕಲೆ ವಂಶವಾಹಿಯಾಗಿ ರಕ್ತದಲ್ಲಿ ಅಂತರ್ಗತವಾದದ್ದು. ವಿಜಯನಗರದ ಅರಸರ ಕಾಲದಿಂದಲೂ ಚಿತ್ರ ಕಲೆಯೇ ವೃತ್ತಿಯಾದ ವಂಶ ಅವರದು. ತಂದೆ ಕೃಷ್ಣಪ್ಪನವರು ಮೈಸೂರು ಮಹಾರಾಜರ ಆಸ್ಥಾನದಲ್ಲಿ ಕಲಾವಿದರಾಗಿದ್ದರು. ಬಾಲ್ಯದಲ್ಲೇ ವೆಂಕಟಪ್ಪನವರು ರಚಿಸಿದ ಕಲಾಕೃತಿಯೊಂದು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜರ ಕಣ್ಣಿಗೆ ಬಿತ್ತು. ಮೆಚ್ಚಿಕೊಂಡ ನಾಲ್ವಡಿಯವರು ಬಾಲಕನ ಕಲಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು. ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಾಲೆ, ಮದ್ರಾಸಿನ ಕಲಾ ಶಾಲೆಗಳಲ್ಲಿ ಕಲೆಯನ್ನು ಅಭ್ಯಾಸ ಮಾಡಿ ವೆಂಕಟಪ್ಪನವರು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಕಲ್ಕತ್ತೆಯಲ್ಲಿ ಪರ್ಸಿ ಬ್ರೌನ್ ಮತ್ತು ಅವನೀಂದ್ರನಾಥ ಠಾಕೂರರ ಮಾರ್ಗದರ್ಶನದಲ್ಲಿ ಉನ್ನತ ಕಲಾ ವ್ಯಾಸಂಗ ನಡೆಸಿದರು. ಜಗತ್ಪ್ರಸಿದ್ಧ ಕಲಾವಿದ ನಂದಲಾಲ್ ಬಸು ಇವರ ಸಹಪಾಠಿ.
1920ರಲ್ಲಿ ಮೈಸೂರಿಗೆ ಹಿಂದಿರುಗಿದ ವೆಂಕಟಪ್ಪನವರು ಅಲ್ಲಿ ಕಲಾ ಮಂದಿರ ಸ್ಥಾಪಿಸಿದರು. ರಾಮಾಯಣ, ಮಹಾಭಾರತ ಕಥಾವಸ್ತುವುಳ್ಳ ಚಿತ್ರಗಳನ್ನು ರಚಿಸಿದರು. ಶಂಕರಾಚಾರ್ಯ, ಬುದ್ಧ, ಟಿಪ್ಪು ಸುಲ್ತಾನ್, ದಮಯಂತಿ, ಅರ್ಧನಾರೀಶ್ವರ, ಬಂಗಾಳದ ಪಕ್ಷಿಗಳು-ವೆಂಕಟಪ್ಪನವರ ಅನನ್ಯ ಕಲಾ ಶೈಲಿಯ ವಿಶಿಷ್ಟ ಛಾಪನ್ನು ಮೂಡಿರುವ ಲೋಕವಿಖ್ಯಾತ ಕೃತಿಗಳು. ಅವರ ಕುಂಚದಲ್ಲಿ ಮೂಡಿ ಬಂದಿರುವ ಊಟಿ ಮತ್ತು ಕೊಡೈಕೆನಾಲ್ ನಿಸರ್ಗ ದೃಶ್ಯಗಳು ನಯನ ಮನೋಹರವಾದವು.ಗಾಂಧೀಜಿಯವರು ಊಟಿಯ ಚಿತ್ರಗಳನ್ನು ಕಂಡು ‘ನನಗೆ ಚಳಿಯಾಗುತ್ತಿದೆ’ ಎಂದಿದ್ದರಂತೆ!

ಕುಂಚ ಕಲೆಯಲ್ಲಷ್ಟೆ ಅಲ್ಲದೆ, ಶಿಲ್ಪ ಕಲೆಯಲ್ಲೂ ವೆಂಕಟಪ್ಪ ಸಿದ್ಧಹಸ್ತರಾಗಿದ್ದರು. ಪ್ಲಾಸ್ಟರ್ ಆಫ್‌ ಪ್ಯಾರಿಸ್ ಮಾಧ್ಯಮದಲ್ಲಿ ಅವರು ರಚಿಸಿರುವ ರವೀಂದ್ರನಾಥ ಠಾಕೂರ್, ವೀಣೆ ಶೇಷಣ್ಣ, ಬುದ್ಧನ ಮಹಾ ತ್ಯಾಗ, ಶಿವತಾಂಡವ ಮೊದಲಾದ ಶಿಲ್ಪಗಳು ಇಂದಿಗೂ ಲೋಕಪ್ರಸಿದ್ಧ ಕಲಾಕೃತಿಗಳು. ವೆಂಕಟಪ್ಪನವರದು ಬಹುಮುಖಿ ಪ್ರತಿಭೆ. ಚಿತ್ರಕಲೆ, ಶಿಲ್ಪಕಲೆಯಷ್ಟೇ ಅಲ್ಲದೆ ಅವರು ಸಂಗೀತದ ಗಾಢಾನುರಾಗಿಯಾಗಿದ್ದರು. ವೀಣೆಯ ಹುಚ್ಚನ್ನು ವಿಪರೀತವಾಗಿ ಅಂಟಿಸಿಕೊಂಡಿದ್ದ ಅವರು 22 ತಂತಿಗಳ ಯ್ರತಿ ವೀಣೆಯನ್ನು ಸ್ವತಃ ನಿರ್ಮಿಸಿದ್ದರು. ಬ್ರಹ್ಮಚಾರಿಯಾಗಿದ್ದ ವೆಂಕಟಪ್ಪ, ವೃದ್ಧಾಪ್ಯಲ್ಲಿ ಮೈಸೂರು ತ್ಯಜಿಸಿ ಬೆಂಗಳೂರಿಗೆ ಬಂದು ನೆಲೆಸಿದರು. ಕಲೆಯನ್ನು ಒಂದು ತಪಸ್ಸು ಎಂದು ತಿಳಿದು, ಶ್ರದ್ಧೆ, ಪೂಜ್ಯ ಭಾವನೆಯಿಂದ ಕಲಿತ ವೆಂಕಟಪ್ಪ, ಕೊನೆಗಾಲದವರೆಗೂ ತಾನು ಕಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿರಲಿಲ್ಲ.

 ಇಂತಹ ಹಿರಿಯ ಚೇತನದ ಸ್ಮರಣಾರ್ಥ ಕರ್ನಾಟಕ ಸರಕಾರ ಬೆಂಗಳೂರು ಮಹಾನಗರದಲ್ಲಿ ಸ್ಥಾಪಿಸಿರುವ ಚಿತ್ರ ಶಾಲೆ: ವೆಂಕಟಪ್ಪ ಆರ್ಟ್ ಗ್ಯಾಲರಿ. ಈ ಗ್ಯಾಲರಿಯನ್ನು ‘ತುಂಬಾ ಶೋಚನೀಯ ಸ್ಥಿತಿಯಲ್ಲಿದೆ’ ಎಂಬ ಕಾರಣದಿಂದ ಸರಕಾರ ಅದನ್ನು ಖಾಸಗಿಯವರಿಗೆ ಪರಭಾರೆ ಮಾಡಿರುವುದೇ ಇವತ್ತಿನ ಎಲ್ಲ ವಿವಾದಗಳ ಮೂಲ. ಹಠಾತ್ತನೆ ಸರಕಾರ ವೆಂಕಟಪ್ಪಆರ್ಟ್ ಗ್ಯಾಲರಿಯನ್ನು ತಸ್ವೀರ್ ಫೌಂಡೇಷನ್ನಿಗೆ ‘ದತ್ತಕ’ ಎಂಬ ಹೆಸರಿನಲ್ಲಿ ವಹಿಸಿಕೊಟ್ಟಿರುವುದರಿಂದ ಹಿರಿಯ-ಕಿರಿಯ ಚಿತ್ರಕಾರರೆಲ್ಲರಲ್ಲೂ ತವರಿನ ಸಂಬಂಧ ಮುರಿದಂತೆಯೇ ಎನ್ನುವ ಆತಂಕ ಉಂಟಾಗಿದೆ. ವೆಂಕಟಪ್ಪ ಆರ್ಟ್ ಗ್ಯಾಲರಿ ಚಿತ್ರ ಕಲಾವಿದರಿಗೆ ಅಧ್ಯಯನದ ಭಂಡಾರವಾಗಿತ್ತು, ತಮ್ಮ ಚಿತ್ರಗಳ ಪ್ರದರ್ಶನ ಶಾಲೆಯಾಗಿತ್ತು. ಕಲಾಪ್ರೇಮಿ ರಸಿಕರಿಗಂತೂ ಪವಿತ್ರ ಯಾತ್ರಾ ಕೇಂದ್ರ.
 ಅಭಿವೃದ್ಧಿಗಾಗಿ ಖಾಸಗಿಯವರೊಂದಿಗೆ ಸಹಭಾಗಿತ್ವ, ಕಾರ್ಪೊರೇಟ್ ವಲಯಗಳ ಸಾಮಾಜಿಕ ಹೊಣೆಗಾರಿಕೆ-ಪಾಲುದಾರಿಕೆ ಇವೆಲ್ಲ ಭಾರತೀಯ ಅರ್ಥ ವ್ಯವಸ್ಥೆಯ ಹೊಸ ಖಯಾಲಿಗಳು. ಈ ಮಾತಿಗೆ ನಮ್ಮ ಕಣ್ಣೆದುರಿಗಿರುವ ಇತ್ತೀಚಿನ ನಿರ್ದಶನ, ವೆಂಕಟಪ್ಪ ಆರ್ಟ್ ಗ್ಯಾಲರಿ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಪರಿಕಲ್ಪನೆಯಡಿ ರಾಜ್ಯ ಸರಕಾರ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಅಭಿವೃದ್ಧಿ ಪಡಿಸಲೋಸ್ಕರ ತಸ್ವೀರ್ ಪ್ರತಿಷ್ಠಾನಕ್ಕೆ ಹಸ್ತಾಂತರಿಸಿದೆ. ಈ ಸಂಬಂಧ ಒಮ್ಮತದ ಒಡಂಬಡಿಕೆಗೂ ಸಹಿ ಹಾಕಿದೆ. ಇದು ಐದು ವರ್ಷಗಳ ಅವಯ ಒಪ್ಪಂದ. ಈ ಅವಯಲ್ಲಿ ಸರಕಾರ ನೀರು, ವಿದ್ಯುತ್ತನ್ನು ಉಚಿತವಾಗಿ ಪೂರೈಸಲಿದೆ. ಐದು ವರ್ಷಗಳ ನಂತರವೂ ಹೊಂದಾಣಿಕೆ ಅಬಾತವಾಗಿ ನಡೆದಲ್ಲಿ ಈ ವ್ಯವಸ್ಥೆ ಐದುನೂರು ವರ್ಷಗಳವರೆಗೂ ಮುಂದುವರಿಯಬಹುದು.

  ಇದು ಗ್ಯಾಲರಿಯ ಖಾಸಗೀಕರಣವಲ್ಲ, ಅಭಿವೃದ್ಧಿಗಾಗಿ ದತ್ತು ಕೊಡಲಾಗಿದೆ ಎನ್ನುವುದು ಸರಕಾರ ಆತಂಕ ಪೀಡಿತ ಕಲಾವಿದರಿಗೆ ನೀಡಿರುವ ಸಮಜಾಯಿಷಿ. ಶಾಸಕ ರಮೇಶ್ ಕುಮಾರ್ ಅವರು ಹೇಳಿರುವಂತೆ, ದತ್ತುಕೊಟ್ಟಿರುವುದೇ ನಿಜವಾಗಿದ್ದಲ್ಲಿ, ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವಾದರೂ ಏನಿತ್ತು? ಇದು ಖಾಸಗೀಕರಣ ಅಲ್ಲ ಎಂದು ತಸ್ವೀರ್ ಪ್ರತಿಷ್ಠಾನವು ಹೇಳುತ್ತದೆ. ಖಾಸಗಿ ವ್ಯಕ್ತಿಗಳಂದ ಧನಸಹಾಯ ಪಡೆದು ಗ್ಯಾಲರಿಯನ್ನು ಪ್ರದರ್ಶನ ಕಲೆಗಳು, ಆಧುನಿಕ ಸಮಕಾಲೀನ ಕಲೆಗಳು, ಜನಪದ ಮತ್ತು ಬುಡಕಟ್ಟು ಕಲೆಗಳು, ಛಾಯಾಚಿತ್ರ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲಾಗುವುದು... ಗ್ಯಾಲರಿಯನ್ನು ಅಭಿವೃದ್ಧಿಪಡಿಸಿದ ನಂತರ ಈಗಿರುವ ಕಲಾಕೃತಿಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ಗ್ಯಾಲರಿಯನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು...ರಾಜ್ಯದ ಹೆಮ್ಮೆಯ ಸಂಸ್ಥೆಯಾಗಿ ರೂಪಿಸಲಾಗುವುದು...ಅಲ್ಲದೆ ಗ್ಯಾಲರಿಯಲ್ಲಿ ಸಭಾಂಗಣ, ಕಲಾ ಗ್ರಂಥಾಲಯ, ದಾಖಲೆಗಳ ಸಂಗ್ರಹ, ಸಂಶೋಧನಾ ಕೇಂದ್ರ ನಿರ್ಮಿಸಲಾಗುವುದು ಎಂದು ತಸ್ವೀರ್ ಪ್ರತಿಷ್ಠಾನವೂ ಆಶ್ವಾಸನೆ ನೀಡಿದೆ. ಆದರೂ ಕಲಾವಿದರ ಶಂಕೆ-ಸಂದೇಹಗಳು, ಆತಂಕಗಳು ನಿವಾರಣೆಯಾಗಿಲ್ಲ.

 ಚಿತ್ರಕಲಾ ಸಮುದಾಯದ ಶಂಕೆ, ಆತಂಕಗಳು ಸಹಜವಾದ ಪ್ರತಿಕ್ರಿಯೆಯೇ ಆಗಿವೆ. ಏಕೆಂದರೆ, ಇಡೀ ವಿದ್ಯಮಾನವನ್ನು ಕೂಲಂಕಶವಾಗಿ ಗಮನಿಸಿದಾಗ ಹಲವಾರು ಅನುಮಾನಗಳು, ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದಾಗಿ, ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಿರುವುದಕ್ಕೆ ಅದರ ಈಗಿನ ‘ಶೋಚನೀಯ ಸ್ಥಿತಿಯೇ’ ಕಾರಣ ಎಂದು ಪ್ರವಾಸೋದ್ಯಮ ಸಚಿವ ದೇಶಪಾಂಡೆಯವರು ಹೇಳಿರುವುದನ್ನು ಗಮನಿಸದೇ ಇರಲಾಗದು. ಪ್ರಥಮತ: ಗ್ಯಾಲರಿ ಇಂಥ ಶೋಚನೀಯ ಸ್ಥಿತಿಗಿಳಿಯಲು ಏನು ಕಾರಣ? ಶೋಚನೀಯ ಸ್ಥ್ಥಿತಿಗಿಳಿಯುತ್ತಿರುವುದನ್ನು ನೋಡಿಕೊಂಡು ಸರಕಾರ ಇಲ್ಲಿಯವರೆಗೆ ಕೈಕಟ್ಟಿ ಕುಳಿತದ್ದೇಕೆ? ಇದಕ್ಕೆ ಕಾರಣರು ಯಾರು, ಹೊಣೆ ಯಾರು? ಈ ಶೋಚನೀಯ ಪರಿಸ್ಥಿತಿಯಿಂದ ಗ್ಯಾಲರಿಯನ್ನು ಮೇಲಕ್ಕೆತ್ತಲು ಖಾಸಗಿಯವರಿಗೆ ಪರಭಾರೆ ಮಾಡುವುದೊಂದೇ ಪರಿಹಾರ ಮಾರ್ಗವೇ? ಅದನ್ನು ನಿರ್ವಹಿಸುವಂಥ ಸಾಧನಸಂಪತ್ತು ಸರಕಾರದಲ್ಲಿಲ್ಲವೇ? ಎಲ್ಲಕ್ಕಿಂತ ಮುಖ್ಯವಾಗಿ ವೆಂಕಟಪ್ಪ ಆರ್ಟ್ ಗ್ಯಾಲರಿ ಆಡಳಿತ ನಿರ್ವಹಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ್ದು. ಇದರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಏಕಿಂಥ ಆಸಕ್ತಿ?

ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿ ರೂಪಿಸಿ ಬೊಕ್ಕಸಕ್ಕೆ ವರಮಾನ ತರುವುದು ಪ್ರವಾಸೋದ್ಯಮ ಇಲಾಖೆಯ ಆಸಕ್ತಿ ಇದ್ದೀತು ಎಂದು ಊಹಿಸುವುದು ಕಷ್ಟವೇನಲ್ಲ. ಎಲ್ಲಿ ಪ್ರವಾಸಿ ಆಕರ್ಷಣೆ ಇರುತ್ತದೊ ಅಲ್ಲಿ ವಾಣಿಜ್ಯ ಹಿತಾಸಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಇದ್ದೇ ಇರುತ್ತವೆ. ಪ್ರವಾಸಿ ಆಕರ್ಷಣೆ ಎಂದರೆ ಮನರಂಜನೆ ಇರಲೇಬೇಕು. ಅಂದರೆ, ಅಂಗಡಿಮುಂಗಟ್ಟುಗಳು, ಪಬ್ಬುಬಾರು ಮೊದಲಾದ ಮನರಂಜನಾ ಕೇಂದ್ರಗಳು ಬರುತ್ತವೆ. ಇವೆಲ್ಲ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಆವರಿಸಿದರೆ ಅದು ಕಲಾದೇಗುಲವಾಗಿ ಹೇಗೆ ಉಳಿದೀತು? ಅದರ ಪಾವಿತ್ರ್ಯ ಹೇಗೆ ಉಳಿದೀತು? ಕಲಾವಿದರು ಕೆಲಸಮಾಡುವಂಥ ಸೃಜನಾತ್ಮಕ ಪರಿಸರವಾಗಿ ಅದು ಉಳಿಯಲು ಸಾಧ್ಯವೇ? ವಾಣಿಜ್ಯ ಹಿತಾಸಕ್ತಿಗಳು ಪ್ರವೇಶಿಸಿದಲ್ಲಿ ಅಲ್ಲಿನ ಕಲಾ ಪರಂಪರೆ ಮತ್ತು ಕಲಾ ಸಂಪತ್ತಿನ ರಕ್ಷಣೆ ಹೇಗೆ ಸಾಧ್ಯವಾದೀತು? ಜೊತೆಗೆ, ವೆಂಕಟಪ್ಪ ಆರ್ಟ್ ಗ್ಯಾಲರಿಯ ಜಾಗದ ಈಗಿನ ಮಾರುಕಟ್ಟೆ ವೌಲ್ಯ 400 ಕೋಟಿ ರೂ.ಗಳಿಗೂ ಮೀರಿದ್ದು. ಪ್ರತಿಷ್ಠಾನವಾಗಲೀ ಅಥವಾ ಈ ಆವರಣ ಪ್ರವೇಶಿಸುವ ಯಾವುದೇ ವಾಣಿಜ್ಯ ಪಟ್ಟಭದ್ರಹಿತಾಸಕ್ತಿಯಾಗಲಿಶ ಇದರ ರಿಯಲ್ ಎಸ್ಟೇಟ್ ಕಿಮ್ಮತ್ತಿನ ಲಾಭ ಪಡೆದುಕೊಳ್ಳುವುದಿಲ್ಲ ಎನ್ನವುದಕ್ಕೆ ಏನು ಖಾತರಿ?

ಚಿತ್ರಕಾರರು ವ್ಯಕ್ತಪಡಿಸಿರುವ ಶಂಕೆ, ಆತಂಕಗಳಲ್ಲಿ ಎರಡು ತುಂಬ ಗುರುತರವಾದವು. ಒಂದು: ವೆಂಕಟಪ್ಪ ಆರ್ಟ್ ಗ್ಯಾಲರಿ ಮುಂದೆ ಚಿತ್ರಕಲಾ ಪ್ರದರ್ಶನಕ್ಕೆ/ಕಲಾ ಮೇಳಕ್ಕೆ ಈಗಿನಷ್ಟು ಸುಲಭವಾಗಿ ಸಿಗದೆ ಹೋಗಬಹುದು. ಸಿಕ್ಕರೂ ಅದು ಬಡ ಕಲಾವಿದರ ಕೈಗೆಟುಕುವ ದರದಲ್ಲಿ ಸಿಗಲಾರದು. ಎರಡು: ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಈಗ ವೆಂಕಟಪ್ಪನವರ ಕಲಾಕೃತಿಗಳಲ್ಲದೆ, ಕೆ.ಕೆ.ಹೆಬ್ಬಾರ್ ಮತ್ತು ರಾಜಾ ರಾವ್ ಅವರ ಕಲಾಕೃತಿಗಳ ಸಂಗ್ರಹವಿದೆ. ಇವು ಯಾವುದೂ ಸರಕಾರದ ಸ್ವತ್ತಲ್ಲ. ಈ ಕಲಾಕೃತಿಗಳು ನಾಡಿನ ಸಂಪತ್ತು. ಈ ಕಲಾ ಸಂಪತ್ತು ಮುಂದಿನ ಪೀಳಿಗೆಗೆ ಸುಲಭವಾಗಿ ಸಿಗುವಂತಾಗಲಿ ಎಂಬ ಘನ ಉದ್ದೇಶದಿಂದ ಕಲಾವಿದರ ಬಂಧುಗಳು ಅವನ್ನು ವೆಂಕಟಪ್ಪ ಗ್ಯಾಲರಿ ಮುಖಾಂತರ ಸರಕಾರದ ಸುಪರ್ದಿಗೊಪ್ಪಿಸಿದ್ದಾರೆ. ಈ ಅಮೂಲ್ಯ ಕಲಾಸಂಪತ್ತಿನ ರಕ್ಷಣೆ ಸರಕಾರದ ನೈತಿಕ ಹೊಣೆಯಲ್ಲವೇ? ರಕ್ಷಿಸಬೇಕಾದ ಸರಕಾರವೇ ಅದನ್ನು ಖಾಸಗಿಯವರ ಕೈಗೊಪ್ಪಿಸಿದಾಗ ಅವುಗಳ ಸುರಕ್ಷತೆ ಬಗ್ಗೆ ಏನು ಭರವಸೆ? ಈ ಅಮೂಲ್ಯ ಕಲಾ ಸಂಪತ್ತನ್ನು ಲೂಟಿಹೊಡೆಯಲು ಗ್ಯಾಲರಿಯನ್ನು ಖಾಸಗಿಯವರ ಕೈಗೊಪ್ಪಿಸಲಾಗಿದೆ ಎಂದು ಗುಮಾನಿ ಉಂಟಾಗಿದ್ದರೆ ಅದು ಅಸಹಜವೇನಲ್ಲ. ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ಆರ್ಟ್ ಗ್ಯಾಲರಿಯನ್ನು ದತ್ತು ನೀಡಲಾಗಿದೆಯೆ ಹೊರತು ಅದನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸಿಲ್ಲ ಅಥವಾ ಗುತ್ತಿಗೆ ಆಧಾರದ ಮೇಲೂ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಆಶ್ವಾಸನೆ ನಿಜವಾಗಬೇಕಷ್ಟೆ.

ಭರತ ವಾಕ್ಯ:
ಋಣವ ತೀರಿಸಬೇಕು, ಋಣವ ತೀರಿಸಬೇಕು
ಕಲೆಯಲಿ ಜಗದಾದಿಸತ್ತ್ವವ ಕಾಣುತ,
ಪ್ರತಿಲಾಪೇಕ್ಷೆಯಿಲ್ಲದೆ ಕಲೆಯ ಪೋಷಿಸಬೇಕು
ಕಾರ್ಪೊರೇಟ್ ದಾನಪರಾಯಣರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X