ಮುಲ್ಕಿ ಸರಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ
ಮುಲ್ಕಿ, ಮಾ.26: ಸರಕಾರಿ ಅನುದಾನವನ್ನು ಸಮರ್ಪಕವಾಗಿ ಸದು ಪಯೋಗಪಡಿಸಿದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಯುವಜನ ಸೇವೆ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಮುಲ್ಕಿಯ ಕೆ.ಎಸ್.ರಾವ್ ನಗರದ ಸರಕಾರಿ ಪ್ರೌಢಶಾಲೆಯಲ್ಲಿ 84.5 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 9 ಶಾಲಾ ಕೊಠಡಿಗಳ ಎರಡು ಅಂತಸ್ತಿನ ಕಟ್ಟಡ ಹಾಗೂ ಶಾಸಕರ ನಿಧಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನವೀಕೃತ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ನಳಿನ್‌ಕುಮಾರ್ ಕಟೀಲು, ಮುಲ್ಕಿ ನಪಂ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮುಖ್ಯಾಧಿಕಾರಿ ವಾಣಿ ಆಳ್ವ, ಸದಸ್ಯರಾದ ಶೈಲೇಶ್, ಬಿ.ಎಂ.ಆಸಿಫ್, ವಿಮಲಾ ಪೂಜಾರಿ, ಶಂಕ್ರವ್ವ, ಕಲಾವತಿ, ಬಶೀರ್ ಕುಳಾಯಿ, ಪುತ್ತು ಬಾವು, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಮತಿಭಾಯಿ, ಪ್ರಭಾರ ಮುಖ್ಯಶಿಕ್ಷಕಿ ವಿಂಧ್ಯಾ ಕಿಣಿ ಮತ್ತಿತರರು ಉಪಸ್ಥಿತರಿದ್ದರು.
Next Story





