ಕದ್ರಿ: ಇನ್‌ಲ್ಯಾಂಡ್ ಎವಿನ್ಸ್ ಉದ್ಘಾಟನೆ

ಮಂಗಳೂರು, ಮಾ.26: ಕಟ್ಟಡ ನಿರ್ಮಾಣದಲ್ಲಿ ಹೆಸರು ವಾಸಿಯಾಗಿರುವ ನಗರದ ಇನ್‌ಲ್ಯಾಂಡ್ ಬಿಲ್ಡರ್ಸ್ ಸಂಸ್ಥೆ ಯಿಂದ ಕದ್ರಿಯಲ್ಲಿ ನೂತನವಾಗಿ ನಿರ್ಮಿಸಿರುವ ‘ಇನ್‌ಲ್ಯಾಂಡ್ ಎವಿನ್ಸ್’ ವಸತಿ ಸಮುಚ್ಚಯ ಇಂದು ಉದ್ಘಾಟ ನೆಗೊಂಡಿತು.
ಸ್ಥಳೀಯ ಕಾರ್ಪೊರೇಟರ್ ಅಶೋಕ್ ಡಿ.ಕೆ. ನೂತನ ಸಮುಚ್ಚಯದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್, ಅವರ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ಮೆರಾಜ್ ಯೂಸುಫ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಮಹಾಬಲೇಶ್ವರ ಬಿಲ್ಡರ್ಸ್‌ನ ಅಧ್ಯಕ್ಷ ಕೆ.ಸಿ.ನಾಯಕ್, ಪ್ಲಾಮಾ ಬಿಲ್ಡರ್ಸ್‌ನ ರಝಾಕ್ ಮೊದಲಾದವರು ಉಪಸ್ಥಿತರಿದ್ದರು.
ಅಶೋಕ್ ಡಿ.ಕೆ. ಮಾತನಾಡಿ, ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಸಿರಾಜ್ ಅಹ್ಮದ್ ಅವರ ಕೊಡುಗೆ ಅಪಾರವಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಅವರ ಯಾವುದೇ ಯೋಜನೆಯಲ್ಲೂ ಪ್ರಥಮ ಹಂತದಲ್ಲೇ ಫ್ಲಾಟ್‌ಗಳು ವಿಕ್ರಯವಾಗುವುದು ಅವರ ಪ್ರಾಮಾಣಿಕತೆ, ಶ್ರದ್ಧೆ, ಕಟ್ಟಡ ನಿರ್ಮಾಣದಲ್ಲಿ ಬಳಸಿದ ಉತ್ಕೃಷ್ಟ ಗುಣ ಮಟ್ಟವೇ ಸಾಕ್ಷಿಯಾಗಿದೆ ಎಂದರು.
ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಗಿರಿಧರ ಭಟ್, ಬೆಂದೂರ್ ಚರ್ಚ್‌ನ ಧರ್ಮಗುರು ಫಾ.ಆ್ಯಂಟನಿ ಸೆರಾವೊ ಮತ್ತು ಅಲ್ ಅಝ್‌ಹರಿಯ ಮದ್ರಸದ ಯಹ್ಯಾ ಮದನಿ ಧಾರ್ಮಿಕ ವಿಧಿಯನ್ನು ನೆರವೇರಿಸಿದರು.





