Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತೀಯ ಹಸುಗಳ ಆರ್ಥಿಕತೆ

ಭಾರತೀಯ ಹಸುಗಳ ಆರ್ಥಿಕತೆ

ವಾರ್ತಾಭಾರತಿವಾರ್ತಾಭಾರತಿ26 March 2016 11:59 PM IST
share
ಭಾರತೀಯ ಹಸುಗಳ ಆರ್ಥಿಕತೆ

ಇತ್ತೀಚಿನ ತಿಂಗಳಲ್ಲಿ ಪೂಜ್ಯಭಾವ, ದೇಶದ ಸಾಮಾಜಿಕ ರೂಪುರೇಷೆಯನ್ನು ಹಾಳುಗೆಡವುವ ಬೆದರಿಕೆಯೊಡ್ಡುವ ಮೂಲಕ ಪ್ರಾಣಿಯೊಂದು ಮಾರಣಾಂತಿಕವಾಗಿ ಪರಿಣಮಿಸಿದೆ. ಜನರ ಹತ್ಯೆಯಂತಹ ಘಟನೆಗಳನ್ನೂ ಸೇರಿ, ಭಾರತವನ್ನು ತಲ್ಲಣಗೊಳಿಸಿದ ವಿವಾದಗಳ ಕೇಂದ್ರಬಿಂದುವಾಗಿದೆ. ಸೆಪ್ಟಂಬರ್ 2015ರಲ್ಲಿ ಉತ್ತರ ಪ್ರದೇಶದ ದಾದ್ರಿ ಎಂಬಲ್ಲಿ ಹಿಂದೂಗಳ ಗುಂಪೊಂದು ವ್ಯಕ್ತಿಯೊಬ್ಬ ಬೀಫ್ ಸೇವಿಸಿದ್ದಾನೆ ಎಂದು ಆರೋಪಿಸಿ ಆತನನ್ನು ಥಳಿಸಿ ಹತ್ಯೆ ಮಾಡಿತ್ತು. ನಂತರ ವಿಧಿವಿಜ್ಞಾನ ಇಲಾಖೆಯ ವರದಿ ಮಾತ್ರ ಅದು ಆಡಿನ ಮಾಂಸವಾಗಿತ್ತು, ಬೀಫ್ ಆಗಿರಲಿಲ್ಲ ಎಂದು ಹೇಳಿತ್ತು. ಕಳೆದ ವಾರ ಭಾರತದ ಪೂರ್ವದ ರಾಜ್ಯವಾದ ಜಾರ್ಖಂಡ್‌ನಲ್ಲಿ ಹದಿನೈದು ವರ್ಷದ ಯುವಕನೂ ಸೇರಿ ಇಬ್ಬರು ದನಕಾಯೋರನ್ನು ಅವರು ತಮ್ಮ ಹಸುಗಳನ್ನು ವಾರದ ಸಂತೆಗೆ ಕೊಂಡೊಯ್ಯುತ್ತಿದ್ದ ವೇಳೆ ಅವರಿಗೆ ಥಳಿಸಿ ಹತ್ಯೆ ಮಾಡಲಾಗಿತ್ತು. ಬಂಧಿತ ಐವರಲ್ಲಿ ಒಬ್ಬಾತ ಗೋಸಂರಕ್ಷಣಾ ಸಂಘಟನೆಯ ಸದಸ್ಯನಾಗಿದ್ದ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. ಗೋ ಸಂರಕ್ಷಕರು ವರ್ಷಗಳಿಂದ ಭಾರತದ ಹಲವು ಭಾಗಗಳಲ್ಲಿ ಉಪದ್ರವ ನೀಡುತ್ತಲೇ ಇದ್ದಾರೆ, ಆದರೆ ಈಗಿನ ನರೇಂದ್ರ ಮೋದಿ ಸರಕಾರದಲ್ಲಿ ಅವರ ಧೈರ್ಯ ಮತ್ತಷ್ಟು ಹೆಚ್ಚಾಗಿದೆ. ಈ ಹಿಂದೆ ಭಾರತೀಯ ಪ್ರಧಾನ ಮಂತ್ರಿಯವರೇ, ಗೋಹತ್ಯೆ ನನ್ನನ್ನು ‘ದುಃಖಿತನನ್ನಾಗಿಸುತ್ತದೆ’ ಎಂದು ಹೇಳಿಕೊಂಡಿದ್ದರು. 2014ರ ಭಾರತೀಯ ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರು ಆಗಿನ ಕಾಂಗ್ರೆಸ್ ನೇತೃತ್ವದ ಸರಕಾರವು ಗುಲಾಬಿ ಕ್ರಾಂತಿ (ಭಾರತದ ಮಾಂಸ ರಫ್ತಿಗಿರುವ ಅನ್ವರ್ಥ ಹೆಸರು) ಯನ್ನು ಪೋಷಿಸಿದೆ ಎಂದು ಪದೇಪದೇ ಹೇಳುತ್ತಾ ತೀವ್ರಗಾಮಿ ಭಾವನೆಯನ್ನು ಕೆರಳಿಸಿದ್ದರು. ಸರಕಾರ ಗೋಹತ್ಯೆಯನ್ನು ನಿಯಂತ್ರಣ ಮಾಡುತ್ತಿದ್ದರೂ, ಪಶು ಈಗಲೂ ಭಾರತದ ಆರ್ಥಿಕತೆಯ ಅತ್ಯಂತ ಪ್ರಮುಖ ಭಾಗವಾಗಿದೆ. ಭಾರತವು ಬೀಫನ್ನು ಅತ್ಯಂತ ದೊಡ್ಡ ರಫ್ತುಗಾರನಾಗಿದ್ದು, ಈ ಉತ್ಪಾದನೆ ಹೆಚ್ಚುತ್ತಲೇ ಸಾಗಿದೆ. ಗೋ ವ್ಯಾಪಾರ ಈ ಅಂತರ್ಜಾಲವನ್ನು ತಲುಪಿದೆ. ಭಾರತವು ಬೀಫ್ ಸೇವನೆಯಲ್ಲಿ ಜಗತ್ತಿನ ಐದನೆ ದೊಡ್ಡ ರಾಷ್ಟ್ರವಾಗಿದೆ. ಈ ಆರು ಅಂಕಿಅಂಶಗಳು ಭಾರತದಲ್ಲಿ ಪಶುವಿನ ಆರ್ಥಿಕ ಪ್ರಾಮುಖ್ಯತೆಯನ್ನು ತೋರಿಸುತ್ತದೆ:
ಪಶುಗಳ ಸಂಖ್ಯೆ:

ಇತ್ತೀಚಿನ ಪಶು ಗಣತಿಯ ಪ್ರಕಾರ ಭಾರತದಲ್ಲಿ ಹಸುಗಳ ಸಂಖ್ಯೆ ವೃದ್ಧಿಸಿದ್ದರೂ ಎತ್ತುಗಳ ಸಂಖ್ಯೆ ಇಳಿಮುಖವಾಗಿದೆ. ಇದು ಹಸುಗಳಿಗಿಂತ ಹೆಚ್ಚು ಎತ್ತುಗಳನ್ನು ವಧಿಸಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಎತ್ತುಗಳ ಸಂಖ್ಯೆ 2007ಕ್ಕಿಂತ 2012ರಲ್ಲಿ ಶೇ.19 ಇಳಿಕೆಯಾಗಿದೆ. ಒಟ್ಟಾರೆಯಾಗಿ ಪಶುಗಳ ಸಂಖ್ಯೆ 2007ರಿಂದ ಐದು ವರ್ಷಗಳಲ್ಲಿ ಶೇ.4.1 ಇಳಿಕೆಯಾಗಿದೆ. ಬೀಫ್ ಉತ್ಪಾದನೆ:

ಭಾರತವು ಗೋಮಾಂಸ ಉತ್ಪಾದನೆಯಲ್ಲಿ ಬ್ರೆಝಿಲ್, ಯೂರೋಪ್ ಸಮೂಹ ಮತ್ತು ಚೀನಾದ ನಂತರ ನಾಲ್ಕನೆ ಸ್ಥಾನದಲ್ಲಿದೆ. ಭಾರತದ ಮೂರನೆ ದೊಡ್ಡ ಆರ್ಥಿಕತೆಯಾದ ಭಾರತದಲ್ಲಿ ಮಾಂಸದ ಉತ್ಪಾದನೆಯಲ್ಲಿ ಬೀಫ್ ಎರಡನೆ ಸ್ಥಾನವನ್ನು ಪಡೆದಿದೆ. ಪಶುಸಂಗೋಪನಾ, ಡೈರಿ ಮತ್ತು ಮೀನುಗಾರಿಕಾ ಇಲಾಖೆಯ ಅಂಕಿಅಂಶಗಳ ಪ್ರಕಾರ ಬಹುತೇಕ ಗೋಮಾಂಸವು ಕೋಣಗಳಿಂದ ಪಡೆಯಲಾಗುತ್ತಿದ್ದು ಉಳಿದ ಮಾಂಸ ಇತರ ಪಶುಗಳಿಂದ ಪಡೆಯಲಾಗುತ್ತದೆ. ಗೋಮಾಂಸ ರಫ್ತು

2013ರವರೆಗೆ ಬ್ರೆಝಿಲ್ ಜಗತ್ತಿನ ಅಗ್ರ ಗೋಮಾಂಸ ರಫ್ತುದಾರನಾಗಿತ್ತು. ಈಗ ಆ ಸ್ಥಾನವನ್ನು ಭಾರತ ಪಡೆದುಕೊಂಡಿದೆ ಮತ್ತು ರಫ್ತು ದರ ಹೆಚ್ಚಾಗುತ್ತಲೇ ಸಾಗಿದೆ. ಭಾರತ ರಫ್ತು ಮಾಡುವ ಬಹುತೇಕ ಗೋಮಾಂಸವು ನೀರೆಮ್ಮೆಯದ್ದಾಗಿದೆ, ಇದು ಹಸುವಿನ ಮಾಂಸಕ್ಕಿಂತ ಅಗ್ಗವಾಗಿದೆ. ಸಿಎನ್‌ಎನ್ 2015ರ ಆಗಸ್ಟ್‌ನಲ್ಲಿ ವರದಿ ಮಾಡಿದಂತೆ, ಗೋಮಾಂಸ ರಫ್ತಿನಿಂದ ಭಾರತವು ಸುವಾಸನೆಯುಕ್ತ ಬಾಸ್ಮತಿ ಅಕ್ಕಿಯ ರಫ್ತಿನಿಂದ ಅಧಿಕ ವಿದೇಶಿ ಆದಾಯವನ್ನು ಗಳಿಸುತ್ತದೆ. ವಿಯೆಟ್ನಾಂ, ಮಲೇಷ್ಯಾ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಭಾರತದಿಂದ ಗೋಮಾಂಸವನ್ನುಆಮದು ಮಾಡಿಕೊಳ್ಳುವ ಕೆಲವು ದೇಶಗಳು. ಭಾರತದಲ್ಲಿ ಸೇವನೆ:
ಭಾರತವು ಜಗತ್ತಿನ ಐದನೆ ಅತೀದೊಡ್ಡ ಗೋಮಾಂಸ ಸೇವಿಸುವ ದೇಶವಾಗಿದೆ ಮತ್ತು ಗೋಮಾಂಸ ಭಕ್ಷಣೆಯು ಕೆಲವು ವರ್ಷಗಳಿಂದೀಚೆಗೆ ಹೆಚ್ಚಾಗುತ್ತಲೇ ಸಾಗಿದೆ. ಮುಸ್ಲಿಮರು ಗೋಮಾಂಸ ಸೇವನೆಯಲ್ಲಿ ಮೊದಲಿಗರಾಗಿದ್ದಾರೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ಪ್ರಕಾರ ಭಾರತದಲ್ಲಿ ಪ್ರತೀ ಹದಿಮೂರು ವ್ಯಕ್ತಿಗಳಲ್ಲಿ ಒಬ್ಬ ಬೀಫ್ ಅಥವಾ ಕೋಣದ ಮಾಂಸ ಸೇವಿಸುತ್ತಾನೆ. ಅತೀ ಹೆಚ್ಚು ಬೀಫ್ ಸೇವಿಸುವ ಭಾರತದ ರಾಜ್ಯಗಳ ಪೈಕಿ ಈಶಾನ್ಯ ರಾಜ್ಯ ಮೇಘಾಲಯ ಮತ್ತು ಲಕ್ಷದ್ವೀಪದ ಕರಾವಳಿ ಕೇಂದ್ರಾಡಳಿತ ಪ್ರದೇಶಗಳು ಅಗ್ರಸ್ಥಾನದಲ್ಲಿವೆ. ಭಾರತೀಯ ಮುಸ್ಲಿಮರ ಪೈಕಿ ಶೇ.40 ಸದ್ಯ ಬೀಫ್ ಸೇವನೆ ಮಾಡಿದರೆ, ಹಿಂದೂಗಳ ಪೈಕಿ ಶೇ.2 ಕ್ಕೂ ಕಡಿಮೆ ಜನರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಶೇ.26 ಕ್ರೈಸ್ತರು ಬೀಫ್ ಸೇವಿಸುತ್ತಾರೆ.

ಹಸುಗಳು ಕೂಡಾ ಆನ್‌ಲೈನ್ ಆಗಿವೆ

ಭಾರತದಲ್ಲಿ ಇ-ಕಾಮರ್ಸ್ ಮಾರುಕಟ್ಟೆ ಬೆಳೆದಾಗಿನಿಂದ ಬಹಳಷ್ಟು ರೈತರು ತಮ್ಮ ಹಸು ಮತ್ತು ಎತ್ತುಗಳನ್ನು ಮಾರಲು ಪ್ರಸಿದ್ಧ ಆನ್‌ಲೈನ್ ಮಾರುಕಟ್ಟೆಗಳಾದ ಒಎಲ್‌ಎಕ್ಸ್ ಮತ್ತು ಕ್ವಿಕನ್ ಅರ್ನ್ನು ಆಯ್ಕೆ ಮಾಡುತ್ತಿದ್ದಾರೆ. ಇವುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಶುಗಳು ಭಾರತದ ಎರಡನೆ ಮತ್ತು ಮೂರನೆ ದರ್ಜೆ ಪಟ್ಟಣಗಳಿಂದ ಬರುತ್ತವೆ. ಕಳೆದ ವರ್ಷ ಮುಸ್ಲಿಮರ ಹಬ್ಬ ಬಕ್ರೀದ್ ಸಂದರ್ಭದಲ್ಲಿ ಆಡುಗಳನ್ನು ಕೂಡಾ ಆನ್‌ಲೈನ್‌ಲ್ಲಿ ಮಾರಾಟ ಮಾಡಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X