ಡಾ.ಕೆ.ಬಲವೀರ ರೆಡ್ಡಿಗೆ ‘ಮೈಟ್ ಶೈಕ್ಷಣಿಕ ಸಾಧಕ ಪ್ರಶಸ್ತಿ’
ಮಂಗಳೂರು, ಮಾ.26: ಜೀವಮಾನದ ಸಾಧನೆಗಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಬಲವೀರ ರೆಡ್ಡಿಗೆ ಮೂಡುಬಿದಿರೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್(ಮೈಟ್) ವತಿಯಿಂದ ‘ಶಿಕ್ಷಣ ಕ್ಷೇತ್ರದ ಶ್ರೇಷ್ಠ ಸಾಧಕ’ ಪ್ರಶಸ್ತಿ ನೀಡಿ ಇತ್ತೀಚೆಗೆ ಗೌರವಿಸಲಾಗಿದೆ.
ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ವಾರ್ಷಿಕ ತಾಂತ್ರಿಕ ಹಾಗೂ ನಿರ್ವಹಣಾ ಉತ್ಸವ ‘ಸೆಂಟಿಯಾ’2016ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಸಚಿವ ಅಭಯಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.
Next Story