ಇದು ಅಂತಿಂಥ ಲಿಂಬೆಯಲ್ಲ; ಇದರ ಬೆಲೆ 39 ಸಾವಿರ ರೂಪಾಯಿ

ವಿಳ್ಳುಪುರಂ, ಮಾ.27: ತಮಿಳುನಾಡಿದ ವಿಳ್ಳುಪುರಂ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಪಾಲ್ಗುಣಿ ಉತಿರಾಂ ಹಬ್ಬದ ವೇಳೆ ನಡೆದ ಹರಾಜಿನಲ್ಲಿ ನಿಂಬೆಹಣ್ಣೊಂದು 39 ಸಾವಿರ ರೂಪಾಯಿ ದಾಖಲೆ ಬೆಲೆಗೆ ಬಿಕರಿಯಾಗಿದೆ.
ತಿರುವಣ್ಣೈನಲ್ಲೂರಿನ ಬಲದಂಡಯುಪಾಣಿ ದೇವಸ್ಥಾನದಲ್ಲಿ ಹನ್ನೊಂದು ದಿನದ ಉತ್ಸವ ಮುಗಿದ ಬಳಿಕ, ಭಕ್ತರು ದೇವಸ್ಥಾನಕ್ಕೆ ಹರಕೆಯಾಗಿ ಒಪ್ಪಿಸಿ ದೇವರ ಮೂರ್ತಿಗೆ ಚುಚ್ಚಿದ ಹಣ್ಣುಗಳನ್ನು ಹರಾಜು ಹಾಕುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದ ವಾಡಿಕೆ. ದೇವರ ನಿಂಬೆಯನ್ನು ಪಡೆಯುವುದು ಸಮೃದ್ಧಿಯ ಸಂಕೇತ ಮತ್ತು ದಂಪತಿಗಳಿಗೆ ಇದರಿಂದ ಸಂತಾನ ಭಾಗ್ಯ ಉಂಟಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಈ ರ್ವ ಜಯರಾಮನ್- ಅಮರಾವತಿ ದಂಪತಿ ನಿಂಬೆಹಣ್ಣನ್ನು ಹರಾಜಿನಲ್ಲಿ ಪಡೆದುಕೊಂಡರು. ಇತರ ಎಂಟು ನಿಂಬೆಹಣ್ಣುಗಳು ಒಟ್ಟು 57,722 ರೂಪಾಯಿಗೆ ಹರಾಜಾದವು.
ಈ ದೇವಾಲಯ ಯಾವಾಗ ನಿರ್ಮಾಣವಾಯಿತು ಎನ್ನುವುದು ಯಾರಿಗೂ ತಿಳಿಯದು. ಬೆಟ್ಟದ ತಪ್ಪಲು ಪ್ರದೇಶದಲ್ಲಿ ಈ ದೇವಾಲಯ ಇದೆ. ಹಲವಾರು ವರ್ಷದ ಬಳಿಕ ಈ ದೇವಸ್ಥಾನ ಕಂಡುಬಂತು ಎಂದು ಗ್ರಾಮದ ಹಿರಿಯರೊಬ್ಬರು ಹೇಳುತ್ತಾರೆ.





