ಇದೋ ಇಲ್ಲಿ ನಾಯಿ ಕಾರು ಚಲಾಯಿಸುತ್ತಿದೆ ಗೊತ್ತಾ!
ಹೊಸದಿಲ್ಲಿ, ಮಾರ್ಚ್.27: ಸೋಶಿಯಲ್ ಮೀಡಿಯಾದಲ್ಲಿ ಇದೀಗ ಕಾರ್‌ಡ್ರೈವಿಂಗ್ ವೀಡಿಯೊ ಬಹಳ ಜನಪ್ರಿಯವಾಗಿದೆ. ಕಾರನ್ನು ಚಲಾಯಿಸುತ್ತಿರುವುದು ಒಂದು ನಾಯಿ ಎಂಬುದೇ ಈ ವೀಡಿಯೊದ ವಿಶೇಷವಾಗಿದೆ. ನಾಯಿ ಚಾಲನೆಯ ಕಾರಿನ ವೀಡಿಯೊ ಜನಪ್ರಿಯತೆಯಲ್ಲಿ ಗರಿಷ್ಠಮಟ್ಟವನ್ನುಮುಟ್ಟಿದೆಯೆಂದು ವರದಿಯಾಗಿವೆ.
ವೀಡಿಯೊದಲ್ಲಿ ನಾಯಿ ಸೀಟ್‌ಬೆಲ್ಟ್ ಹಾಕಿಸಿಕೊಂಡು ಮನಷ್ಯರಂತೆ ಕಾರನ್ನು ಓಡಿಸುತ್ತಿದೆ. ಈ ನಾಯಿಗೆ ಅದರ ಮಾಲಕಿ ಕಾರು ಚಲಾಯಿಸುವ ತರಬೇತಿ ನೀಡಿರುವುದಾಗಿ ವರದಿಯಾಗಿದೆ. ಅದಕ್ಕಾಗಿ ಮನೆಯಲ್ಲಿಯೇ ಕಾರ್‌ಡ್ರೈವಿಂಗ್‌ಗೆ ಸೆಟ್‌ಅಪ್ ಮಾಡಲಾಯಿತಂತೆ! ಆನಂತರ ನಾಯಿಗೆ ಪ್ರಾಕ್ಟೀಸ್ ಮಾಡಲಾಗಿದ್ದು ಈ ರೋಚಕ ವೀಡಿಯೊವನ್ನು ಸೋಶಿಯಲ್ ಮೀಡಿಯದಲ್ಲಿ ಈ ವರೆಗೆ ಬಹಳಷ್ಟು ಮಂದಿ ಮೆಚ್ಚಿದ್ದಾರೆ. ಈವರೆಗೆ ಹದಿನೈದು ಸಾವಿರ ಮಂದಿ ಶೇರ್ ಮಾಡಿದ್ದಲ್ಲದೆ ಲಕ್ಷಾಂತರ ಮಂದಿ ವೀಡಿಯೊವನ್ನು ವೀಕ್ಷಿಸಿದ್ದಾರೆಂದು ವರದಿಗಳು ತಿಳಿಸಿವೆ.
Next Story





