2ನೆ ಕ್ಲಾಸಿನ ಪ್ರೀತಿ ಚುನಾವಣಾ ಆಯೋಗದ ಬ್ರಾಂಡ್ ಅಂಬಾಸಡರ್!

ತಿರುವಣ್ಣಮಲೈ, ಮಾರ್ಚ್. 27: ತಮಿಳ್ನಾಡಿನ ಎರಡನೆ ಕ್ಲಾಸ್‌ನಲ್ಲಿ ಕಲಿಯುವ ಪ್ರೀತಿಯನ್ನು ಬ್ರಾಂಡ್ ಅಂಬಾಸಡರ್ ಮಾಡಲಾಗಿದೆ. ಇದಕ್ಕೆ ಕಾರಣವೇನೆಂದರೆ ಏಳು ವರ್ಷದ ಪ್ರೀತಿ ಐದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಪ್ರದೇಶದ ಎಲ್ಲ 234 ಚುನಾವಣಾ ಕ್ಷೇತ್ರದ ಹೆಸರನ್ನು ಎಣಿಸುತ್ತಾಳೆ ಅದು ಅವಳಿಗೆ ನೆನಪಿದೆ. ಇನ್ನು ಈ ಬಾಲೆ ತಮಿಳ್ನಾಡು ನಾಗರಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುತ್ತ ಕಾಣಿಸಿಕೊಳ್ಳಲಿದ್ದಾಳೆ.
ವರದಿಯಾಗಿರುವಂತೆ ವಿಲಾನಲ್ಲಡಪುರ ಯೂನಿಯನ್‌ನ ಮಾಧ್ಯಮಿಕ ಶಾಲೆಯಲ್ಲಿ ಪ್ರೀತಿ ಕಲಿಯುತ್ತಿದ್ದಾಳೆ. ಚುನಾವಣಾ ಆಯೋಗವು ಚೇರ್ ಚುನಾವಣಾ ಕ್ಷೇತ್ರಗಳಿಗೆ ಬ್ರಾಂಡ್ ಅಂಬಾಸಡರ್ ಮಾಡಿದೆ. ಇದನ್ನು ಗುರುವಾರ ಪ್ರಕಟಿಸಲಾಗಿದ್ದು. ಶೀಘ್ರದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ನಿರ್ಮಿಸಲಾಗುವ ಕಿರುಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾಳೆ. ತಮಿಳ್ನಾಡಿನ ಚೀಫ್ ಇಲೆಕ್ಷನ್ ಆಫೀಸರ್ ರಾಜೇಶ್ ಲಖಾನಿಯವರು ನಾವು ಯುವ ಪ್ರತಿಭೆಗಳನ್ನು ಪರಿಚಯಿಸುತ್ತೇವೆ ಮತ್ತು ಅವರ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆಂದು ವರದಿಯಾಗಿದೆ.





