ನಿಮ್ಮ ದೇಹದ ಈ ಭಾಗಗಳನ್ನು ನೀವು ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲ, ಆದರೆ ಮಾಡಲೇಬೇಕು!

ಬಹಳಷ್ಟು ಮಂದಿಗೆ ನೈರ್ಮಲ್ಯ ಎಂದರೆ ದೇಹದ ವಾಸನೆಯನ್ನು ಹೋಗಲಾಡಿಸುವುದೇ ಆಗಿರುತ್ತದೆ. ಅಂದರೆ ಹಲ್ಲುಜ್ಜುವುದು, ಸ್ನಾನ ಮಾಡುವುದು, ಕೈ ತೊಳೆಯುವುದು ಇತ್ಯಾದಿ. ಆದರೆ ಇಷ್ಟೇ ನೈರ್ಮಲ್ಯವಲ್ಲ. ಸ್ವತಃ ನಿರ್ಮಲವಾಗಬೇಕೆಂದರೆ ಇದಕ್ಕಿಂತ ಹೆಚ್ಚಿನದು ಮಾಡಬೇಕು.
ಹಲ್ಲು
ಹಲ್ಲನ್ನು ಸ್ವಚ್ಛವಾಗಿಡುವುದು ಎಂದ ಕೂಡಲೇ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದಲ್ಲ. ಪ್ರತೀ ಬಾರಿ ಏನಾದರೂ ತಿಂದಾಗಲೂ ಹಲ್ಲುಜ್ಜಬೇಕು ಮತ್ತು ಕಾಲ ಕಾಲಕ್ಕೆ ದಂತ ತಜ್ಞರನ್ನು ಕಂಡು ಹಲ್ಲನ್ನು ತೋರಿಸುತ್ತಿರಬೇಕು.
ನಾಲಗೆ
ಬಾಯಲ್ಲಿ ಹಲ್ಲು ಮಾತ್ರ ಸ್ವಚ್ಛವಾಗಿದ್ದರೆ ಸಾಲದು. ನಾಲಗೆಯ ಬ್ಯಾಕ್ಟೀರಿಯವನ್ನೂ ತೆಗೆದು ಕೆಟ್ಟ ವಾಸನೆ ಬರುವುದನ್ನು ತಡೆಬೇಕು. ನಾಲಗೆ ಸ್ವಚ್ಛ ಮಾಡುವ ಕಡ್ಡಿಯನ್ನು ಬಳಸಿ.
ಹೊಕ್ಕಳು
ಹೊಕ್ಕಳ ಗುಂಡಿಯನ್ನು ಸ್ವಚ್ಛ ಮಾಡುವ ಅಭ್ಯಾಸ ಬಹಳ ಕಡಿಮೆ. ಆದರೆ ವಾರಕ್ಕೆ ಒಮ್ಮೆಯಾದರೂ ಸೋಪ್ ಮತ್ತು ಕಾಟನ್ ಬಡ್ ತೆಗೆದುಕೊಂಡು ಜಾಗವನ್ನು ಸ್ವಚ್ಛ ಮಾಡಬೇಕು.
ಬೆರಳುಗಳ ನಡುವಿನ ಜಾಗ
ನೀವು ಕಾಲುಗಳನ್ನು ತೊಳೆಯುತ್ತಿರಬಹುದು. ಆದರೆ ಕಾಲ ಬೆರಳುಗಳ ಮಧ್ಯೆ ಸ್ವಚ್ಛ ಮಾಡಲು ಮತ್ತು ಬೆರಳುಗಳ ತುದಿಯನ್ನು ಸ್ವಚ್ಛ ಮಾಡಲು ಮರೆಯಬಹುದು. ಅವುಗಳನ್ನು ಬಹಳ ಆರೈಕೆಯಿಂದ ನೋಡಿಕೊಳ್ಳಬೇಕು. ಏಕೆಂದರೆ ಬ್ಯಾಕ್ಟೀರಿಯಗಳು ಮತ್ತು ಕೀಟಾಣುಗಳು ಹೆಚ್ಚಾಗಿ ವಾಸನೆ ಹೊಡೆಯುವ ಪಾದಗಳಿಗೇ ಅಂಟಿಕೊಳ್ಳುತ್ತವೆ.







