‘ಒಂದೇ ಕರೆಯ ಮೂಲಕ ರೈಲ್ವೆ ಟಿಕೆಟ್ ರದ್ದುಪಡಿಸಬಹುದು’
ಎಪ್ರಿಲ್‌ನಲ್ಲಿ ರೈಲ್ವೆಯ ಹೊಸ ಯೋಜನೆ ಜಾರಿ

ಹೊಸದಿಲ್ಲಿ, ಮಾ.27: ಕೇವಲ ಒಂದೇ ಕರೆಯ ಮೂಲಕ ಖಚಿತವಾಗಿರುವ ರೈಲ್ವೇ ಟಿಕೆಟ್‌ಗಳನ್ನು ರದ್ದುಪಡಿಸಬಹುದು. ಇಂತಹದ್ದೊಂದು ಜನಪಯೋಗಿ ವ್ಯವಸ್ಥೆಯನ್ನು ಭಾರತೀಯ ರೈಲ್ವೇ ಮುಂದಿನ ತಿಂಗಳು ಜಾರಿಗೆ ತರಲು ತಯಾರಿ ನಡೆಸುತ್ತಿದೆ.
ಖಚಿತವಾದ ಟಿಕೆಟ್‌ಗಳನ್ನು ರದ್ದುಪಡಿಸಲು ಸರಿಯಾದ ಸಮಯಕ್ಕೆ ಕೌಂಟರ್ ತಲುಪಲು ಕಷ್ಟಪಡುವ ಪ್ರಯಾಣಿಕರಿಗೆ ಈ ವ್ಯವಸ್ಥೆಯಿಂದ ಪ್ರಯೋಜನವಾಗಲಿದೆ.139 ಸಂಖ್ಯೆಗೆ ಕರೆ ಮಾಡಿ ಖಚಿತವಾದ ಟಿಕೆಟ್ ಬಗ್ಗೆ ವಿವರ ನೀಡಬೇಕು. ಆಗ ಅವರಿಗೆ ಒನ್‌ಟೈಮ್ ಪಾಸ್‌ವರ್ಡ್(ಒಟಿಪಿ) ನೀಡಲಾಗುತ್ತದೆ. ಪ್ರಯಾಣಿಕ ಅದೇ ದಿನ ಕೌಂಟರ್‌ಗೆ ತೆರಳಿ ಒಟಿಪಿ ನೀಡಿದರೆ ಟಿಕೆಟ್ ಹಣವನ್ನು ಮರು ಪಾವತಿಸಲಾಗುತ್ತದ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದವರು ಟಿಕೆಟ್ ವೆಬ್‌ಸೈಟ್‌ಗಳ ಮೂಲಕ ಟಿಕೆಟ್‌ನ್ನು ರದ್ದುಪಡಿಸಬೇಕು. ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆದವರು 139 ಸಂಖ್ಯೆಯನ್ನು ಬಳಸಬೇಕು. ಹೊಸ ವ್ಯವಸ್ಥೆಯ ಸಾಫ್ಟ್‌ವೇರ್ ಸಿದ್ಧವಾಗಿದ್ದು, ಎಪ್ರಿಲ್‌ನ ಎರಡನೆ ವಾರದಲ್ಲಿ ಅಧಿಕೃತವಾಗಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.





