ನಟ ಸಲೀಂ ಕುಮಾರ್‌ರನ್ನು ಕೊಂದ ವಾಟ್ಸ್‌ಆ್ಯಪ್!

ತಿರುವನಂತಪುರಂ, ಮಾರ್ಚ್.27: ಮಳೆಯಾಳಂ ಸಿನೆಮಾತಾರೆಯರು ಅಕಾಲಿಕ ಮೃತ್ಯಗೀಡಾಗುತ್ತಿರುವ ಈ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಸಿನೆಮಾ ತಾರೆಗಳು ಸಾಯುತ್ತಿರುವ ವಾರ್ತೆಯನ್ನು ನೋಡಿ ಕೆಲವರು ನಂಬದಿದ್ದರೂ ಕೆಲವರು ನಂಬಿಬಿಟ್ಟಿದ್ದಾರೆ. ಚ್ಯಾನೆಲ್‌ಗಳ ಲೋಗೊದೊಂದಿಗೆ ಇಂತಹ ಸುದ್ದಿಗಳು ಬರುತ್ತಿರುವುದರಿಂದ ಕೆಲವರು ಈ ನಕಲಿ ವಾರ್ತೆಗಳನ್ನು ನಂಬಿ ಮೋಸಹೋಗುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಮನೆಯಲ್ಲಿ ಕುಟುಂಬದೊಂದಿಗೆ ಸಂತೋಷದೊಂದಿಗೆ ಇರುವ ಸಲೀಂ ಕುಮಾರ್‌ರನ್ನು ಪುನಃ ಸೋಶಿಯಲ್ ಮೀಡಿಯಾ ಸತ್ತರೆಂದು ಸುದ್ದಿ ಹರಡಿದೆ. ಸಲೀಂ ಕುಮಾರ್‌ರನ್ನು ಗಂಭೀರ ಸ್ಥಿತಿಯಲ್ಲಿ ಅಮೃತ ಆಸ್ಪತ್ರೆಗೆ ಅತೀವ ಉಪಚಾರ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಸಲೀಂ ಕುಮಾರ್‌ರ ಆರೋಗ್ಯ ಸ್ಥಿತಿ ಗಭೀರವಾಗಿದೆಯೆಂದು ಕಳೆದ ದಿವಸ ವಾಟ್ಸ್‌ಆ್ಯಪ್ ಸಹಿತ ಇರುವ ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿದ್ದವು. ಇದು ಸಂಪೂರ್ಣ ಆಧಾರರಹಿತ ವರದಿಯೆಂದು ಅಮೃತ ಆಸ್ಪತ್ರೆಯ ವೈದ್ಯರು ಸ್ಪಷ್ಟೀಕರಣ ನೀಡಿದ್ದರು. ನಕಲಿ ವಾರ್ತೆಯ ವಿರುದ್ಧ ಸಲೀಂ ಕುಮಾರ್ ಕಾನೂನು ಕ್ರಮ ಕೈಗೊಳ್ಳುತ್ತೇನೆಂದು ಸಲೀಂ ಕುಮಾರ್ ಪ್ರತಿಕ್ರಿಯಿಸಿದ್ದರು.
ದುಃಖ ಶುಕ್ರವಾರದಂದು ರಾತ್ರೆಯಿಂದ ನಿನ್ನೆ ಮಧ್ಯಾಹ್ನದವರೆಗೆ ಈ ಸುದ್ದಿ ವಾಟ್ಸ್‌ಆ್ಯಪ್ ಸಹಿತ ಸೋಶಿಯಲ್ ಮೀಡಿಯಾಗಳದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿಯನ್ನು ನೋಡಿ ಸಾವಿರಾರು ಪತ್ರಕರ್ತರು ಅಮೃತ ಆಸ್ಪತ್ರೆಗೆ ಫೋನಾಯಿಸಿದ್ದರು. ಕೊನೆಗೆ ಕೇಳಿದವರಿಗೆಲ್ಲ ಮಾಹಿತಿ ನೀಡಿ ಆಸ್ಪತ್ರೆಯವರು ಸುಸ್ತಾಗಿದ್ದರು. ಇದರ ಕುರಿತು ಆಸ್ಪತ್ರೆ ಪ್ರಾಥಮಿಕ ತನಿಖೆ ನಡೆಸಿತು. ಇದು ಎಲ್ಲಿಂದ ಆರಂಭವಾಗಿದೆ ಎಂದು ಕಂಡುಹುಡುಕಲು ಅಮೃತಾಸ್ಪತ್ರೆ ಶ್ರಮಿಸಲಿದೆ ಎಂದು ವರದಿಯಾಗಿದೆ. ಈ ಸುದ್ದಿಯ ಸುಳಿವು ಸಿಕ್ಕರೆ ಕೂಡಲೇ ಅದರ ಪುರಾವೆಗಳನ್ನು ಸಲೀಂ ಕುಮಾರ್‌ರಿಗೆ ಹಸ್ತಾಂತರಿಸುತ್ತೇವೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ವಾರ್ತೆಯ ಕುರಿತು ತಿಳಿದ ಸಲೀಂ ಕುಮಾರ್ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಬಹಳಷ್ಟು ಸಲ ಸೋಶಿಯಲ್ ಮೀಡಿಯಾ ತನ್ನನ್ನು ಕೊಂದಿದೆ. ಆದರೆ ಅದನ್ನು ನಾನು ತಿಳಿದಿದ್ದೇ ಈಗ ಎಂದು ಸಲೀಂ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕಳೆದ ದಿವಸ ಸಲೀಂ ಕುಮಾರ್ ಚೆಕ್‌ಅಪ್‌ಗಾಗಿ ಅಮೃತ ಆಸ್ಪತ್ರೆಗೆ ಬಂದಿದ್ದರು. ಇದು ಸಲೀಂ ಕುಮಾರ್‌ರ ಸ್ಥಿತಿ ಗಂಭೀರವಾಗಿದೆಯೆಂದು ಸುದ್ದಿಯಾಗಲು ಕಾರಣವಾಗಿತ್ತೆಂದು ನಂಬಲಾಗಿದೆ. ಈ ಪ್ರಕರಣದಲ್ಲಿ ಸಲೀಂ ಕುಮಾರ್ ಕಠಿಣ ಕ್ರಮಕ್ಕೆ ಯೋಚಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಇದಕ್ಕೆ ಮುಂಚೆ ಇಂತಹ ಸುದ್ದಿಗಳು ಬಂದಾಗ ಸೈಬರ್ ಸೆಲ್‌ಗೆ ದೂರು ನೀಡಿದ್ದೆ. ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂದಿರುವ ಸಲೀಂಕುಮಾರ್ ಸುಮಾರು ಹದಿನೈದು ಬಾರಿ ತನಗೆ ಅಪಾಯ ಸಂಭವಿಸಿದೆ ಗಂಭೀರ ಸ್ಥಿತಿಯಲ್ಲಿದ್ದೇನೆ ಎಂದುಸೋಶಿಯಲ್ ಮೀಡಿಯಾ ಪ್ರಚಾರ ನಡೆಸಿರುವುವದಾಗಿ ತಿಳಿಸಿದ್ದಾರೆ. ಕಲಾಭವನ್ ಮಣಿ ಸಹಿತ ಕಲಾಕಾರರನ್ನು ಕಳಕೊಂಡ ಈ ವರ್ಷ ಕಳಕೊಂಡಿರುವುದು ನಿಜವಾದರೂ ಅದರ ಸುದ್ದಿಗಳೊಂದಿಗೆ ತನ್ನ ಮರಣವನ್ನು ಮೊದಲೇ ಆಚರಿಸುವ ಕೆಲವು ಸೋಶಿಯಲ್ ಮೀಡಿಯಾ ಮಾನಸಿಕ ರೋಗಿಗಳು ಕೃತ್ಯವೆಸಗಿದ್ದಾರೆ ಎಂದು ಸಲೀಂಕುಮಾರ್ ಹೇಳಿದ್ದಾರೆ.
ನಕಲಿ ಸುದ್ದಿ ಮೊದಲು ಬಂದ ವಾಟ್ಸ್‌ಆ್ಯಪ್ ನಂಬರ್‌ನ್ನು ಕಂಡು ಹುಡುಕುವ ಪ್ರಯತ್ನಕ್ಕೆ ಸಲೀಂಕುಮಾರ್‌ರ ನಿಕಟವರ್ತಿಗಳಾದ ಕೆಲವರು ಆರಂಭಿಸಿದ್ದಾರೆಂದು ತಿಳಿದು ಬಂದಿದೆ. ಸಲೀಂಕುಮಾರ್‌ರ ವಿರುದ್ಧ ಸೈಬರ್ ಆಕ್ರಮಣ ಮಿತಿಮೀರಿದ್ದರಿಂದ ಅವರು ಈ ಕೆಲಸವನ್ನು ಆರಂಭಿಸಿದ್ದಾರೆ. ಸೈಬರ್ ಸೆಲ್‌ನ ನೆರವು ಯಾಚಿಸಲೂ ಸಲೀಂ ಕುಮಾರ್ ಯೋಚಿಸಿದ್ದಾರೆ. ದುಃಖ ಶುಕ್ರವಾರದಂದು ಸಲೀಂ ಕುಮಾರ್ ರ ಆರೋಗ್ಯ ಸ್ಥಿತಿ ಗಂಭೀರವಾಗಿದೆಯೆಂದು ಸುದ್ದಿಗಳು ಪ್ರಕಟಗೊಂಡಿದ್ದವು. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಲವಾರು ಮಂದಿ ಈ ಸುದ್ದಿಯನ್ನು ಶೇರ್ ಮಾಡಿದ್ದರಿಂದ ಸುದ್ದಿ ವ್ಯಾಪಕವಾಗಿ ಹರಡಿಕೊಂಡಿತೆಂದು ವರದಿಯಾಗಿದೆ.







