Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದ್ವೇಷ ಅಭಿಯಾನವನ್ನು ವಿಫ಼ಲಗೊಳಿಸಿದ ...

ದ್ವೇಷ ಅಭಿಯಾನವನ್ನು ವಿಫ಼ಲಗೊಳಿಸಿದ ಮಾದರಿ ಯುವ IPS ಅಧಿಕಾರಿ

ಸತ್ಯಕ್ಕೆ ಗೆಲುವಾಯಿತು , ಸುಳ್ಳು ಸೋತಿತು

ವಾರ್ತಾಭಾರತಿವಾರ್ತಾಭಾರತಿ27 March 2016 8:16 PM IST
share
ದ್ವೇಷ ಅಭಿಯಾನವನ್ನು ವಿಫ಼ಲಗೊಳಿಸಿದ  ಮಾದರಿ ಯುವ IPS ಅಧಿಕಾರಿ

ಹೊಸದಿಲ್ಲಿ, ಮಾ. ೨೭: ಕಳೆದ ಬುಧವಾರ ದೆಹಲಿಯ ವಿಕಾಸ್ ಪುರಿಯಲ್ಲಿ ನಡೆದ ದಂತವೈದ್ಯ ಪಂಕಜ್ ನಾರಂಗ್ ಅವರ ಬರ್ಬರ ಕೊಲೆಯನ್ನು ಬಳಸಿ ಸಂಘ ಪರಿವಾರದ ಕಾರ್ಯಕರ್ತರು ಹಾಗು ಅದೇ ವಿಚಾರಧಾರೆಯ ಜನರು ಇಡೀ ಪ್ರಕರಣಕ್ಕೆ ಕೋಮು ಹಾಗು ರಾಜಕೀಯ ಬಣ್ಣ ನೀಡಲು ವ್ಯವಸ್ಥಿತ ಅಭಿಯಾನವನ್ನೇ ಪ್ರಾರಂಭಿಸಿದರು. " ಹಿಂದೂ ದಂತವೈದ್ಯನನ್ನು ಬಾಂಗ್ಲಾದೇಶಿ ವಲಸಿಗ ಮುಸ್ಲಿಮರು ಕೊಂದಿದ್ದಾರೆ. ಆದರೆ ಇದನ್ನು ಕೇಜ್ರಿವಾಲ್ , ರಾಹುಲ್ ಹಾಗು ಇಂಗ್ಲೀಶ್ ಮಾಧ್ಯಮಗಳು ಪ್ರಶ್ನಿಸುತ್ತಿಲ್ಲ. ರೋಹಿತ್ ವೇಮುಲ ಪ್ರಕರಣದಲ್ಲಿ ಹೈದರಾಬಾದ್ ಗೆ ಹೋದ ರಾಹುಲ್ ಹಾಗು ಕೇಜ್ರಿವಾಲ್ ಇಲ್ಲೇ ದೆಹಲಿಯಲ್ಲಿ ಹಿಂದೂ ಒಬ್ಬನ ಮನೆಗೆ ಭೇಟಿ ನೀಡಿಲ್ಲ." ಎಂಬುದು ಇವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸುಳ್ಳು ಸಂದೇಶ. ಇದನ್ನು ಮೊದಲು ಪ್ರಾರಂಭಿಸಿದ್ದು www.thefrustratedindian.com ಎಂಬ ಬಲಪಂಥೀಯ , ಹಿಂದುತ್ವ ಪ್ರತಿಪಾದನೆಯ ವೆಬ್ ಸೈಟ್. ಕೂಡಲೇ ಈ ಸುಳ್ಳು ಸುದ್ದಿಯೇ ಸತ್ಯದ ರೂಪ ಪಡೆದು ಎಲ್ಲೆಡೆ ವ್ಯಾಪಕವಾಗಿ ಹರಡಿತು. ದೇಶಾದ್ಯಂತ ಈ ಬಗ್ಗೆ ಚರ್ಚೆ ಪ್ರಾರಂಭವಾಯಿತು. ದೆಹಲಿಯ ಕೊಲೆ ನಡೆದ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಕಾರಿ ಆಗುವ ಸೂಚನೆ ಇತ್ತು. 
ಆದರೆ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯ ಸಮಯ ಪ್ರಜ್ಞೆ ಹಾಗು ಕರ್ತವ್ಯ ಪ್ರಜ್ಞೆ ಈ ಇಡೀ ಸುಳ್ಳು ಅಭಿಯಾನವನ್ನೇ ವಿಫ಼ಲಗೊಳಿಸಿತು. ಪಶ್ಚಿಮ ದೆಹಲಿಯ ಹೆಚ್ಚುವರಿ ಡಿಸಿಪಿ ಐಪಿಎಸ್ ಅಧಿಕಾರಿ ಮೋನಿಕಾ ಭಾರದ್ವಾಜ್ ಒಬ್ಬ ಜವಾಬ್ದಾರಿಯುತ ಪೋಲಿಸ್ ಅಧಿಕಾರಿ ಏನನ್ನು , ಯಾವಾಗ ಮಾಡಬೇಕೋ ಅದನ್ನೇ ಮಾಡಿದರು. ಅವರು ಮಾಡಿದ್ದು - ಪ್ರಕರಣದ ಕುರಿತ ಸತ್ಯವನ್ನು ಸ್ಪಷ್ಟವಾಗಿ, ಸರಳವಾಗಿ  ಎಲ್ಲರಿಗೂ ತಕ್ಷಣ ತಲುಪಿಸಿದ್ದು , ಅಷ್ಟೇ. 
ಮೊದಲು ಮೋನಿಕಾ ಮಾಡಿದ ಟ್ವೀಟ್  ಇಲ್ಲಿದೆ :  “Out of 9 accused persons 5 are Hindu. At the moment of first scuffle, one out of two was Hindu. The Muslim accused are residents of UP, not Bangladesh,”  ( ೯ ಆರೋಪಿಗಳಲ್ಲಿ ೫ ಮಂದಿ ಹಿಂದೂಗಳು. ಮೊದಲು ಜಗಳ ನಡೆದಾಗ ಇಬ್ಬರ ಪೈಕಿ ಒಬ್ಬ ಹಿಂದೂ .ಪ್ರಕರಣದ ಮುಸ್ಲಿಂ ಆರೋಪಿಗಳು ಉತ್ತರ ಪ್ರದೇಶದ ನಿವಾಸಿಗಳು , ಅವರು ಬಾಂಗ್ಲಾ ದೇಶದವರಲ್ಲ. )
ಮೋನಿಕಾರ ಇನ್ನೊಂದು ಟ್ವೀಟ್ ಹೀಗಿದೆ : “4 juveniles are among 9 arrested for murder of Vikaspuri doctor. No religious angle at all, as rumoured by some. We appeal to you to maintain peace,” ( ವಿಕಾಸಪುರಿ ವೈದ್ಯರ ಕೊಲೆ ಪ್ರಕರಣದ ೯ ಬಂಧಿತರಲ್ಲಿ ೪ ಬಾಲಾಪರಾಧಿಗಳು. ಕೆಲವರು ವದಂತಿ ಹರಡಿದಂತೆ ಇದರಲ್ಲಿ ಯಾವುದೇ ಧಾರ್ಮಿಕ ಕಾರಣ ಇಲ್ಲ. ಎಲ್ಲರೂ ಶಾಂತಿ ಕಾಪಾಡಲು ಮನವಿ ")
ಮೋನಿಕಾರ ಈ ಎರಡು ಟ್ವೀಟ್ ಗಳು ಕೂಡಲೇ ವೈರಲ್ ಆಗಿ ಹರಡಿದವು ಹಾಗು ಸುಳ್ಳು ಅಭಿಯಾನವನ್ನು ವಿಫ಼ಲಗೊಳಿಸಿದವು. ಇದರಿಂದ ದೆಹಲಿಯಲ್ಲಿ ಕೋಮು ಗಲಭೆಯಾಗುವುದು ತಪ್ಪಿದ್ದು ಮಾತ್ರವಲ್ಲ ವಿಧಾನ ಸಭಾ ಚುನಾವಣಾ ನಡೆಯುವ ಸಂದರ್ಭದಲ್ಲಿ  ದೇಶಾದ್ಯಂತ ಒಂದು ಹಸಿ ಸುಳ್ಳು ಸತ್ಯದ ರೂಪ ಪಡೆದು ಜನರನ್ನು ವಿಭಜಿಸುವುದು, ದ್ವೇಷ ಹರಡುವುದು ತಪ್ಪಿತು. ಸುಳ್ಳು ಸೋತಿತು , ಸತ್ಯಕ್ಕೆ ಗೆಲುವಾಯಿತು. 
ಇದೇ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬ ಸದಸ್ಯ ತುಷಾರ್ ನಾರಂಗ್ ಎಂಬವರೂ ಈ ಸುಳ್ಳಿನ ಅಭಿಯಾನವನ್ನು ಖಂಡಿಸಿದರು. ಇದರ ಪರಿಣಾಮವಾಗಿ www.thefrustratedindian.com ವೆಬ್ ಸೈಟ್ ತನ್ನ ಸುಳ್ಳು ಸುದ್ದಿಯನ್ನು ಹಿಂದೆಗೆದುಕೊಂಡಿತು. 
ಮೋನಿಕಾ ಭಾರದ್ವಾಜ್ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಮಾದರಿಯಾಗಲಿ. 
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X