ಇಂದು ನಗರದಲ್ಲಿ ನಟ ಚಿರಂಜೀವಿ ಪುತ್ರಿಯ ಮದುವೆ
ಬೆಂಗಳೂರು, ಮಾ. 27: ಕಾಂಗ್ರೆಸ್ ಮುಖಂಡ, ನಟ ಚಿರಂಜೀವಿ ಅವರ ದ್ವಿತೀಯ ಪುತ್ರಿ ಶ್ರೀಜಾ ಮದುವೆ ಸಮಾರಂಭವನ್ನು ಮಾ.28 ಹಾಗೂ 29ರಂದು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹೆಗ್ಗನಹಳ್ಳಿ ಬಳಿಯ ಚಿರಂಜೀವಿ ಪ್ರಕೃತಿ ಾರ್ಮ್ ಹೌಸ್‌ನಲ್ಲಿ ಏರ್ಪಡಿಸಲಾಗಿದೆ.
ಬಾಲ್ಯ ಸ್ನೇಹಿತ ಕಲ್ಯಾಣ್ ಎಂಬವರನ್ನು ಶ್ರೀಜಾ ಮದುವೆಯಾಗುತ್ತಿದ್ದು, ಇಂದಿನ ಮದುವೆ ಸಮಾರಂಭಕ್ಕೆ ಸಂಬಂಕರು ಹಾಗೂ ಚಿತ್ರರಂಗದ ಕೆಲ ನಟ-ನಟಿಯರನ್ನು ಆಹ್ವಾನಿಸಿದ್ದು, 500 ಗಣ್ಯರಿಗೆ ಮಾತ್ರ ಮದುವೆಗೆ ಆಗಮಿಸಲು ಪಾಸ್ ನೀಡಲಾಗಿದೆ. ಅದೇ ರೀತಿ, ಮಾ.31ಕ್ಕೆ ಹೈದರಾಬಾದ್‌ನಲ್ಲಿ ಮತ್ತೆ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮದುವೆ ಸಮಾರಂಭಕ್ಕೆ ಗಣ್ಯರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಾರ್ಮ್ ಹೌಸ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಇಬ್ಬರು ಸಿಪಿಐ, 5 ಮಂದಿ ಎಸ್‌ಐ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಜೊತೆಗೆ ಾರ್ಮ್ ಹೌಸ್ ಸುತ್ತಲೂ ಬೌನ್ಸರ್‌ಗಳನ್ನು ನೇಮಿಸಲಾಗಿದ್ದು, ಮಾಧ್ಯಮದವರಿಗೂ ಒಳಗಡೆ ಹೋಗಲು ನಿರ್ಬಂಧ ವಿಸಲಾಗಿದೆ.





