ಬೆಂಗಳೂರು ಜಿಲ್ಲಾ ಪೊಲೀಸ್ ದೂರು ಪ್ರಾಕಾರ ರಚನೆ
ಬೆಂಗಳೂರು, ಮಾ.27: ಬೆಂಗಳೂರು ಜಿಲ್ಲೆಯ ಜಿಲ್ಲಾ ಪೊಲೀಸ್ ದೂರು ಪ್ರಾಕಾರವನ್ನು ಬೆಂಗಳೂರು ಭಾಗದ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ರಚಿಸಲಾಗಿದೆ. ಪ್ರಾಕಾರದಲ್ಲಿ ಸರಕಾರದ ನಿವತ್ತ ಹೆಚ್ಚುವರಿ ಕಾರ್ಯದರ್ಶಿ ಎ. ಮುನಿಯಲ್ಲಪ್ಪ ಹಾಗೂ ಕೃಷಿಕ ಎಂ.ಚನ್ನೇಗೌಡ ಪ್ರಾಕಾರದ ಸದಸ್ಯರಾಗಿದ್ದಾರೆ. ಹಾಗೂ ಬೆಂಗಳೂರು ಜಿಲ್ಲೆ ಪೊಲೀಸ್ ಸೂಪರಿಂಟೆಂಡೆಂಟ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಬೆಂಗಳೂರು ಜಿಲ್ಲೆಯ ಪೊಲೀಸ್ ಕರ್ತವ್ಯ ಲೋಪ ಹಾಗೂ ದುರ್ನಡತೆ ಕುರಿತು ದೂರುಗಳಿದ್ದಲ್ಲಿ ಅಧ್ಯಕ್ಷರು ಹಾಗೂ ಪ್ರಾದೇಶಿಕ ಆಯುಕ್ತರು, ಬೆಂಗಳೂರು ಭಾಗ, ಬೆಂಗಳೂರು ಜಿಲ್ಲಾ ಪೊಲೀಸ್ ದೂರು ಪ್ರಾಕಾರ, ಎರಡನೆ ಮಹಡಿ, ಬಿ.ಎಂ.ಟಿ.ಸಿ. ಕಟ್ಟಡ, ಕೆ.ಎಚ್. ರಸ್ತೆ, ಶಾಂತಿನಗರ, ಬೆಂಗಳೂರು-27, ದೂರವಾಣಿ ಸಂಖ್ಯೆ 080- 22109665 ಇಲ್ಲಿಗೆ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





