ವಿಶ್ವಕಪ್: ಆಸ್ಟ್ರೇಲಿಯವನ್ನು ಮಣಿಸಿದ ಭಾರತ ಸೆಮಿ ಫೈನಲ್‌ಗೆ

ಮಾ.31 ರಂದು ವೆಸ್ಟ್‌ಇಂಡೀಸ್ ಎದುರಾಳಿ
ಮೊಹಾಲಿ, ಮಾ.27: ವಿರಾಟ್ ಕೊಹ್ಲಿ(ಔಟಾಗದೆ 82,51 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಆಕರ್ಷಕ ಬ್ಯಾಟಿಂಗ್‌ನ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಸೆಮಿ ಫೈನಲ್‌ಗೆ ತಲುಪಲು 161 ರನ್ ಗುರಿ ಪಡೆದಿದ್ದ ಭಾರತ 19.1 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ರನ್ ಬಾರಿಸಿತು.
ಭಾರತ ಒಂದು ಹಂತದಲ್ಲಿ 18 ಎಸೆತಗಳಲ್ಲಿ 39 ರನ್ ಗಳಿಸಬೇಕಾಗಿತ್ತು. ಫಾಕ್ನರ್ ಎಸೆದ 18ನೆ ಓವರ್ ಹಾಗೂ ನೈಲ್ ಎಸೆದ 19ನೆ ಓವರ್‌ನಲ್ಲಿ ಕ್ರಮವಾಗಿ 19 ಹಾಗೂ 16 ರನ್ ಸೂರೆಗೈದ ಭಾರತ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.
ಫಾಕ್ನರ್ ಎಸೆದ ಅಂತಿಮ ಓವರ್‌ನ ಮೊದಲ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಧೋನಿ ತನ್ನದೇ ಶೈಲಿಯಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಭಾರತ ಮಾ.31 ರಂದು ಮುಂಬೈನಲ್ಲಿ ನಡೆಯಲಿರುವ 2ನೆ ಸೆಮಿ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸಲಿದೆ.
5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿದ ಕೊಹ್ಲಿ ಹಾಗೂ ಧೋನಿ(ಔಟಾಗದೆ 18) ತಂಡಕ್ಕೆ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು. ವಿರಾಟ್ ಕೊಹ್ಲಿ(82) ಹಾಗೂ ಯುವರಾಜ್ ಸಿಂಗ್(13)4ನೆ ವಿಕೆಟ್‌ಗೆ ಜೊತೆಯಾಟದಲ್ಲಿ 45 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ರೋಹಿತ್ ಶರ್ಮ(12), ಶಿಖರ್ ಧವನ್(13) ಹಾಗೂ ಸುರೇಶ್ ರೈನಾ(10) ಮತ್ತೊಮ್ಮೆ ವಿಫಲರಾದರು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಫಿಂಚ್(43) ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.
ಉಸ್ಮಾನ್ ಖ್ವಾಜಾ ಹಾಗೂ ಆ್ಯರೊನ್ ಫಿಂಚ್ ಮೊದಲ ವಿಕೆಟ್‌ಗೆ ಸೇರಿಸಿದ 54 ರನ್ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯ 20 ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದೆ.
ಟ್ವೆಂಟಿ-20 ವಿಶ್ವಕಪ್‌ನ ಸೂಪರ್-10ರ ಗ್ರೂಪ್-2ರ ಮಹತ್ವದ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ಖ್ವಾಜಾ ಹಾಗೂ ಫಿಂಚ್ 4.2 ಓವರ್‌ಗಳಲ್ಲಿ 54 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ನೀಡಿದ್ದರು.
ಖ್ವಾಜಾ(26) ವೇಗದ ಬೌಲರ್ ಆಶೀಷ್ ನೆಹ್ರಾಗೆ ವಿಕೆಟ್ ಒಪ್ಪಿಸಿದ ತಕ್ಷಣ ಆಸೀಸ್‌ನ ರನ್ ವೇಗಕ್ಕೆ ಕಡಿವಾಣ ಬಿತ್ತು. ಡೇವಿಡ್ ವಾರ್ನರ್(6) ಹಾಗೂ ಸ್ಮಿತ್(2) ಬೆನ್ನುಬೆನ್ನಿಗೆ ಔಟಾದಾಗ ಆಸೀಸ್‌ನ ಸ್ಕೋರ್ 3 ವಿಕೆಟ್ ನಷ್ಟಕ್ಕೆ 74 ರನ್.
ಸ್ಮಿತ್ ಟೂರ್ನಿಯಲ್ಲಿ ಮೊದಲ ಬಾರಿ ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದ ಯುವರಾಜ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಫಿಂಚ್(43 ರನ್, 34 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಮ್ಯಾಕ್ಸ್‌ವೆಲ್(31) 4ನೆ ವಿಕೆಟ್‌ಗೆ 26 ರನ್ ಜೊತೆಯಾಟ ನಡೆಸಿದರು. ಅರ್ಧಶತಕದ ಮೇಲೆ ಕಣ್ಣಿಟ್ಟಿದ್ದ ಫಿಂಚ್‌ಗೆ ಹಾರ್ದಿಕ್ ಪಾಂಡ್ಯ ಪೆವಿಲಿಯನ್ ಹಾದಿ ತೋರಿಸಿದರು.
ಫಿಂಚ್ ನಿರ್ಗಮನದ ನಂತರ ಜೊತೆಯಾದ ಮ್ಯಾಕ್ಸ್‌ವೆಲ್(31) ಹಾಗೂ ವ್ಯಾಟ್ಸನ್ (ಔಟಾಗದೆ 18)5ನೆ ವಿಕೆಟ್‌ಗೆ 30 ರನ್ ಜೊತೆಯಾಟ ನಡೆಸಿದರು. 28 ಎಸೆತಗಳಲ್ಲಿ ತಲಾ 1 ಬೌಂಡರಿ,ಸಿಕ್ಸರ್ ಬಾರಿಸಿದ ಮ್ಯಾಕ್ಸ್‌ವೆಲ್ 31 ರನ್‌ಗೆ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡಾದರು.
ಅಂತಿಮ ಓವರ್‌ನಲ್ಲಿ 15 ರನ್ ಗಳಿಸಿದ ವ್ಯಾಟ್ಸನ್ ಹಾಗೂ ನೆವಿಲ್ ತಂಡದ ಸ್ಕೋರನ್ನು 160ಕ್ಕೆ ತಲುಪಿಸಿದರು.
ಭಾರತದ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಆಶೀಷ್ ನೆಹ್ರಾ, ಜಸ್‌ಪ್ರೀತ್ ಬುಮ್ರಾ, ಅಶ್ವಿನ್ ಹಾಗೂ ಯುವರಾಜ್ ತಲಾ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಆಸ್ಟ್ರೇಲಿಯ: 20 ಓವರ್‌ಗಳಲ್ಲಿ 160/6
ಉಸ್ಮಾನ್ ಖ್ವಾಜಾ ಸಿ ಧೋನಿ ಬಿ ನೆಹ್ರಾ 26
ಆ್ಯರೊನ್ ಫಿಂಚ್ ಸಿ ಧವನ್ ಬಿ ಪಾಂಡ್ಯ 43
ಡೇವಿಡ್ ವಾರ್ನರ್ ಸ್ಟಂ. ಧೋನಿ ಬಿ ಅಶ್ವಿನ್ 6
ಸ್ಟೀವನ್ ಸ್ಮಿತ್ ಸಿ ಧೋನಿ ಬಿ ಯುವರಾಜ್ ಸಿಂಗ್ 2
ಮ್ಯಾಕ್ಸ್‌ವೆಲ್ ಬಿ ಬುಮ್ರಾ 31
ಶೇನ್ ವ್ಯಾಟ್ಸನ್ ಔಟಾಗದೆ 18
ಫಾಕ್ನರ್ ಸಿ ಕೊಹ್ಲಿ ಬಿ ಪಾಂಡ್ಯ 10
ನೆವಿಲ್ ಔಟಾಗದೆ 10
ಇತರ 14
ವಿಕೆಟ್‌ಪತನ: 1-54, 2-72,3-74, 4-100, 5-130, 6-145
ಬೌಲಿಂಗ್ ವಿವರ:
ಆಶೀಷ್ ನೆಹ್ರಾ 4-0-20-1
ಜಸ್‌ಪ್ರೀತ್ ಬುಮ್ರಾ 4-0-32-1
ಅಶ್ವಿನ್ 2-0-31-1
ಜಡೇಜ 3-0-20-0
ಯುವರಾಜ್ ಸಿಂಗ್ 3-0-19-1
ಹಾರ್ದಿಕ್ ಪಾಂಡ್ಯ 4-0-36-2
ಭಾರತ: 19.1 ಓವರ್‌ಗಳಲ್ಲಿ 161/4
ರೋಹಿತ್ ಶರ್ಮ ಬಿ ವ್ಯಾಟ್ಸನ್ 12
ಶಿಖರ್ ಧವನ್ ಸಿ ಖ್ವಾಜಾ ಬಿ ಕೌಲ್ಟರ್ ನೀಲ್ 13
ವಿರಾಟ್ ಕೊಹ್ಲಿ ಔಟಾಗದೆ 82
ಸುರೇಶ್ ರೈನಾ ಸಿ ನೇವಿಲ್ ಬಿ ವ್ಯಾಟ್ಸನ್ 10
ಯುವರಾಜ್ ಸಿಂಗ್ ಸಿ ವ್ಯಾಟ್ಸನ್ ಬಿ ಫಾಕ್ನರ್ 21
ಎಂಎಸ್ ಧೋನಿ ಔಟಾಗದೆ 18
ಇತರ 5
ವಿಕೆಟ್ ಪತನ: 1-23, 2-37, 3-49, 4-94. ಬೌಲಿಂಗ್ ವಿವರ
ಹೇಝಲ್‌ವುಡ್ 4-0-38-0
ಕೌಲ್ಟರ್ ನೀಲ್ 4-0-33-1
ವ್ಯಾಟ್ಸನ್ 4-0-23-2
ಫಾಕ್ನರ್ 3.1-0-35-1
ಮ್ಯಾಕ್ಸ್‌ವೆಲ್ 2-0-18-0
ಝಾಂಪ 2-0-11-0







