ಕಾಸರಗೋಡು : ನಗರ ಮತ್ತು ಪರಿಸರ ಪ್ರದೇಶಗಳಿಗೆ ದಾಳಿ, ಭಾರೀ ಪ್ರಮಾಣದ ವಿದೇಶಿ ಸಿಗರೇಟ್ ನ್ನು ವಶ ಓರ್ವನ ಬಂಧನ
ಕಾಸರಗೋಡು : ಕಾಸರಗೋಡು ನಗರ ಮತ್ತು ಪರಿಸರ ಪ್ರದೇಶದಲ್ಲಿ ನಡೆಸಿದ ದಾಳಿಯಿಂದ ಬಾರೀ ಪ್ರಮಾಣದ ವಿದೇಶಿ ಸಿಗರೇಟ್ ನ್ನು ವಶಪಡಿಸಿಕೊಂಡಿದ್ದು , ಓರ್ವನನ್ನು ಬಂಧಿಸಲಾಗಿದೆ.
ಬಂಧಿತನನ್ನು ಚೆಮ್ನಾಡಿ ನ ಜಹೀರ್ ಅಬ್ಬಾಸ್ (35) ಎಂದು ಗುರುತಿಸಲಾಗಿದೆ.
ಚೆಮ್ನಾಡ್ ಶಾಲೆ ಬಳಿ ಈತ ಅಂಗಡಿಯನ್ನು ನಡೆಸುತ್ತಿದ್ದಾನೆ .
ಪ್ಯಾಕೆಟ್ ಗಳಲ್ಲಿ ಮುನ್ನೆಚ್ಚರಿಕೆ ಮುದ್ರಿಸದ ವಿದೇಶಿ ಸಿಗರೇಟನ್ನು ಮಾರಾಟ ಮಾಡುತ್ತಿದ್ದನು. ಪ್ಯಾಕೆಟ್ ಗಳಲ್ಲಿ ಮುನ್ನೆಚ್ಚರಿಕೆ ಮುದ್ರಿಸದ ಸಿಗರೇಟ್ ಗಳಿಗೆ ಭಾರತದಲ್ಲಿ ನಿಷೇಧವಿದೆ. ಆದರೆ ಈತ ವಿದೇಶದ ಹಲವು ಬ್ರಾಂಡ್ ಗಳ ಸಿಗರೇಟನ್ನು ಮಾರಾಟ ಮಾಡುತ್ತಿದ್ದನು .
ನಿಷೇಧಿತ ಸಿಗರೇಟ್ ಮತ್ತು ಮಾದಕ , ತಂಬಾಕು ವಸ್ತುಗಳ ಪತ್ತೆಗೆ ಪೊಲೀಸ್ , ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖಾಧಿಕಾರಿಗಳು ತೀವ್ರ ತಪಾಸಣೆ ನಡೆಸುತ್ತಿದೆ.
Next Story