ಅಮೆರಿಕದ ಉಡುಗೊರೆಯ ಅಗತ್ಯವಿಲ್ಲ: ಫಿಡೆಲ್ ಕ್ಯಾಸ್ಟ್ರೊ

ಹವಾನ (ಕ್ಯೂಬ), ಮಾ. 28: ಅಮೆರಿಕ ಮತ್ತು ತನ್ನ ರಾಷ್ಟ್ರದ ನಡುವೆ ಬೆಳೆಯುತ್ತಿರುವ ಸ್ನೇಹಕ್ಕೆ ಕ್ಯೂಬದ ಮಾಜಿ ನಾಯಕ ಫಿಡೆಲ್ ಕ್ಯಾಸ್ಟ್ರೊ ವಿರೋಧ ವ್ಯಕ್ತಪಡಿಸಿದ್ದಾರೆ. ತನ್ನ ದೇಶಕ್ಕೆ ಅಮೆರಿಕದ ‘‘ಬಹುಮಾನದ ಅಗತ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕಮ್ಯುನಿಸ್ಟ್ ದ್ವೀಪ ಕ್ಯೂಬಕ್ಕೆ ಐತಿಹಾಸಿಕ ಭೇಟಿ ನೀಡಿದ್ದಾಗ 89 ವರ್ಷದ ಮಾಜಿ ಅಧ್ಯಕ್ಷ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಒಬಾಮ ಭೇಟಿಯ ಬಗ್ಗೆ ಮೊದಲ ಬಾರಿಗೆ ಅವರ ಅಭಿಪ್ರಾಯ ಪ್ರಕಟಗೊಂಡಿದ್ದು, ಎರಡು ದೇಶಗಳ ನಡುವಿನ ಅರ್ಧ ಶತಮಾನಕ್ಕೂ ಅಧಿಕ ಅವಧಿಯ ವೈರತ್ವವನ್ನು ಮರೆಯಲು ಹಾಗೂ ಕ್ಷಮಿಸಲು ಅವರು ತಯಾರಿಲ್ಲ.
‘‘ಕ್ಯೂಬಕ್ಕೆ ಅಮೆರಿಕದ ಉಡುಗೊರೆಗಳ ಅಗತ್ಯವಿಲ್ಲ’’ ಎಂದು ‘ಗ್ರಾನ್ಮ’ ಪತ್ರಿಕೆಗೆ ಫಿಡೆಲ್ ಕ್ಯಾಸ್ಟ್ರೊ ಹೇಳಿದ್ದಾರೆ.
Next Story





