ಲಾಹೋರ್ ಬಾಂಬ್ ಸ್ಫೋಟದ ಉಗ್ರರ ಬೇಟೆ ಆರಂಭ: ಮೃತರ ಸಂಖ್ಯೆ ಕನಿಷ್ಠ 70ಕ್ಕೆ ಏರಿಕೆ

ಲಾಹೋರ್, ಮಾ. 28: ಲಾಹೋರ್‌ನಲ್ಲಿ ರವಿವಾರ ನಡೆದ ಬಾಂಬ್ ಸ್ಫೋಟದ ಸೂತ್ರಧಾರಿಗಳ ಬೇಟೆಯಲ್ಲಿ ಪಾಕಿಸ್ತಾನ ತೊಡಗಿದೆ.
ಈಸ್ಟರ್ ಸಮಾರಂಭದಲ್ಲಿ ತೊಡಗಿದ್ದ ಕ್ರೈಸ್ತರನ್ನು ಗುರಿಯಾಗಿಸಿ ನಡೆಸಲಾದ ಬಾಂಬ್ ದಾಳಿಯಲ್ಲಿ ಕನಿಷ್ಠ 70 ಮಂದಿ ಮೃತಪಟ್ಟಿದ್ದಾರೆ.
ಲಾಹೋರ್‌ನ ನಿಬಿಡ ಉದ್ಯಾನವೊಂದರಲ್ಲಿ ರವಿವಾರ ಸಂಜೆ ನಡೆದ ಸ್ಫೋಟದಲ್ಲಿ ಮೃತಪಟ್ಟ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಅವರು ಈಸ್ಟರ್ ಹಬ್ಬವನ್ನು ಆಚರಿಸಿ ಸಂಜೆಯ ವಿಹಾರಕ್ಕೆ ಹೋಗಿದ್ದವರು.
‘‘ನಮ್ಮ ಅಮಾಯಕ ಸಹೋದರರು, ಸಹೋದರಿಯರು ಮತ್ತು ಮಕ್ಕಳನ್ನು ಕೊಂದ ಹಂತಕರನ್ನು ನಾವು ನ್ಯಾಯದ ಕಟಕಟೆಗೆ ತರಬೇಕು. ಈ ಅನಾಗರಿಕ ಅಮಾನವರು ನಮ್ಮ ಬದುಕು ಮತ್ತು ಸ್ವಾತಂತ್ರದ ಮೇಲೆ ದಾಳಿ ನಡೆಸಲು ಅವಕಾಶ ನೀಡಬಾರದು’’ ಎಂದು ಸೇನಾ ವಕ್ತಾರ ಅಸೀಮ್ ಬಾಜ್ವ ಟ್ವಿಟರ್‌ನಲ್ಲಿ ಹಾಕಿದ ಪೋಸ್ಟೊಂದರಲ್ಲಿ ಹೇಳಿದ್ದಾರೆ.
ಬಾಂಬ್ ದಾಳಿಯ ಹೊಣೆಯನ್ನು ತಾಲಿಬಾನ್‌ನ ವಿಭಜಿತ ಬಣವೊಂದು ವಹಿಸಿಕೊಂಡಿದೆ.
Next Story





