ಮಂಗಳೂರು : ಮೂಡಿಗೆರೆ ಖಾಝಿಯಾಗಿ ಶೈಖುನಾ ಎಂ.ಎ. ಖಾಸಿಂ ಮುಸ್ಲಿಯಾರ್

ಮಂಗಳೂರು: ಮೂಡಿಗೆರೆ ಸಂಯುಕ್ತ ಜಮಾಅತ್ ಖಾಝಿಯಾಗಿ ಹಿರಿಯ ವಿದ್ವಾಂಸ, ಶೈಖುನಾ ಎಂ.ಎ.ಖಾಸಿಂ ಮುಸ್ಲಿಯಾರ್‌ರನ್ನು ನೇಮಕಗೊಳಿಸಲಾಗಿದೆ.
ಮೂಡಿಗೆರೆ ತಾಲೂಕಿನ ಒಟ್ಟು 24 ಮೊಹಲ್ಲಾ ಜಮಾಅತ್‌ಗಳ ಖಾಝಿಯಾಗಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಖ್ಯಾತ ವಿದ್ವಾಂಸ ಸಯ್ಯದ್ ಅಝ್ಹರಿ ತಂಙಳ್‌ರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ನೇಮಕ ಮಾಡಲಾಗಿದೆ.
ಖಾಝಿಸ್ವೀಕಾರ ಸಮಾರಂಭವು ಏ.19ರಂದು ಮೂಡಿಗೆರೆಯಲ್ಲಿ ನಡೆಯಲಿದ್ದು, ಈ ಸಮಾರಂಭದಲ್ಲಿ ಶೈಖುನಾ ಪಾಣಕ್ಕಾಡ್ ತಂಙಳ್, ಸಮಸ್ತದ ಪ್ರ. ಕಾರ್ಯದರ್ಶಿ ಶೈಖುನಾ ಅಲಿಕುಟ್ಟಿ ಉಸ್ತಾದ್, ಕೋಶಾಧಿಕಾರಿ ಶೈಖುನಾ ಜಿಫ್ರಿ ಮುತ್ತು ಕೋಯ ತಂಙಳ್, ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್, ಶೈಖುನಾ ಎಂ.ಟಿ. ಅಬ್ದುಲ್ಲಾ ಉಸ್ತಾದ್, ಶೈಖುನಾ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್, ಸೈಯ್ಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್, ಚಿಂತಕ, ವಾಗ್ಮಿ ಪಿಣಂಙೋಡ್ ಅಬೂಬಕ್ಕರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಎಂ.ಎ.ಖಾಸಿಂ ಮುಸ್ಲಿಯಾರ್‌ರವರು ಕುಂಬಳೆಯ ಇಮಾಮ್ ಶಾಫಿ ಅಕಾಡಮಿ ಸಂಸ್ಥೆಯ ಸ್ಥಾಪಕರಾಗಿದ್ದು ಸಮಸ್ತ ಶಿಕ್ಷಣ ಮಂಡಳಿಯ ಕೇಂದ್ರೀಯ ಕಾರ್ಯದರ್ಶಿಯಾಗಿ ಸಮಸ್ತ ಕೇಂದ್ರ ಮುಶಾವರದ ಸದಸ್ಯರೂ, ಎಸ್‌ವೈಎಸ್ ನಾಯಕರು, ಪ್ರಖ್ಯಾತ ವಾಗ್ಮಿಯೂ ಆಗಿರುವ ಶೈಖುನಾ ಖಾಸೀಂ ಉಸ್ತಾದ್ ಕಳೆದ ಅರ್ದ ಶತಮಾನಗಳಿಂದ ದರ್ಸ್ ಕ್ಷೇತ್ರದಲ್ಲಿ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಚಕ್ಕಮಕ್ಕಿ ಅಬ್ಬಾಸ್ ಹಾಜಿ ಮತ್ತು ಕಾರ್ಯದರ್ಶಿ ಹನೀಫ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







