ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಕ್ಕು ಚಲಾವಣೆ ಕುರಿತು ಮತದಾರರಿಗೆ ಮಾಹಿತಿ ನೀಡಲು ಆದೇಶ

ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಕ್ಕು ಚಲಾವಣೆ ಕುರಿತು ಮತದಾರರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮತ್ತು ತಾಲೂಕು ಕಛೇರಿಗಳಲ್ಲಿ ವ್ಯವಸ್ಥೆ ಕಲ್ಪಿಸಿದೆ. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಈ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಉಸ್ತುವಾರಿ ಹೊಂದಿರುವ ಉಪ ಜಿಲ್ಲಾಧಿಕಾರಿ ಆರ್ . ಪಿ ಮಹಾದೇವ್ ಕುಮಾರ್ ರವರ ಸಾನಿಧ್ಯದಲ್ಲಿ ಮತಯ೦ತ್ರ ದಲ್ಲಿ ಹಕ್ಕು ಚಲಾವಣೆ ಕುರಿತು ಮಾಹಿತಿ ನೀಡಲಾಯಿತು . ಮತಯ೦ತ್ರ ದ ಮೂಲಕ ಮತ ಚಾಲಾಯಿಸುವ ರೀತಿ ಕುರಿತು ತಿಳುವಳಿಕೆ ನೀಡಲಾಯಿತು. ಮಂಜೇಶ್ವರ , ಕಾನ್ಚಾ೦ಗಾಡ್ , ವೆಳ್ಳರಿಕುಂಡು ತಾಲೂಕು ಕಚೇರಿ , ಹೆಚ್ಚುವರಿ ದಂಡಾಧಿಕಾರಿ ಕಚೇರಿಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ .
ಎಂ . ಸೀತಾರಾಮ , ಪಿ . ಮುಹಮ್ಮದ್ ನಿಸಾರ್ , ಎ . ವಿ ರಾಜನ್ ಮೊದಲಾದವರು ಉಪಸ್ಥಿತರಿದ್ದರು.
Next Story





