ಕಾಸರಗೋಡು : ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾದ ವ್ಯಕ್ತಿಯ ತನಿಖೆಯನ್ನು ಕ್ರೈ೦ ಬ್ರಾಂಚ್ ಗೆ ಒಪ್ಪಿಸುವಂತೆ ಒತ್ತಾಯ

ಕಾಸರಗೋಡು : ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾದ ಮೊಗ್ರಾಲ್ ಬಳ್ಳೂರಿನ ಮುಹಮ್ಮದ್ ಕುನ್ಚಿ (43) ರವರ ನಾಪತ್ತೆ ಕುರಿತ ತನಿಖೆಯನ್ನು ಕ್ರೈ೦ ಬ್ರಾಂಚ್ ಗೆ ಒಪ್ಪಿಸುವಂತೆ ಕ್ರಿಯಾ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರೂ ತನಿಖೆ ಪ್ರಗತಿ ಕಾಣದಿರುವುದರಿಂದ ಉನ್ನತ ಮಟ್ಟದ ತನಿಖೆಗೆ ಸಮಿತಿ ಒತ್ತಾಯಿಸಿದೆ. ೨೦೧೨ ರಲ್ಲಿ ಮುಹಮ್ಮದ್ ಕುನ್ಚಿ ನಾಪತ್ತೆಯಾಗಿದ್ದು, ಎಂಟು ತಿಂಗಳ ಬಳಿಕ ಪತ್ನಿ ಯು ನಾಪತ್ತೆ ಕುರಿತು ಸಂಬಂಧಿಕರಿಗೆ ಮಾಹಿತಿ ನೀಡಿದ್ದರು .
ನಾಪತ್ತೆ ಕುರಿತು ಮುಹಮ್ಮದ್ ಕುನ್ಚಿಯ ಸಹೋದರಿಯ ಪತಿ ಅಬ್ದುಲ್ ಹಮೀದ್ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು.
ನಾಪತ್ತೆ ಕುರಿತು ಪತ್ನಿ ಸಕಿನಾ ಳನ್ನು ವಿಚಾರನೆಗೊಳಪಡಿ ಸಿದ್ದಲ್ಲಿ ಹೆಚ್ಚಿನ ಮಾಹಿತಿ ಲಭಿಸಲಿದೆ .
ತನಿಖೆ ಯನ್ನು ಕೂಡಲೇ ಕ್ರೈ೦ ಬ್ರಾಂಚ್ ಗೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶಾಜಹಾನ್ , ಮಹಮ್ಮೂದ್ , ಅಬ್ದುಲ್ಲ ಬಳ್ಳೂರು , ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.





